Slide
Slide
Slide
previous arrow
next arrow

ಲೋಕಸಭಾ ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ: ಎಸಿ ಅಪರ್ಣಾ ಭಾಗಿ

300x250 AD

ಸಿದ್ದಾಪುರ: ಲೋಕಸಭಾ ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಪಟ್ಟಣದ ಹಾಳದಕಟ್ಟಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಿರಸಿ ಎಸಿ ಅಪರ್ಣಾ ರಮೇಶ ಐಎಸ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಕಾರ್ಯಾಗಾರ ಜರುಗಿತು. ಚುನಾವಣೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. 162 ಪಿಆರ್‌ಒ ಹಾಗೂ 134 ಎಪಿಆರ್‌ಒ ಒಟ್ಟೂ 296 ಜನರು ಮೊದಲ ಸುತ್ತಿನ ತರಬೇತಿ ಪಡೆದುಕೊಂಡರು. ಎಸಿ ಅಪರ್ಣಾ ರಮೇಶ ಐಎಸ್ ತರಬೇತಿ ನಡೆಯುತ್ತಿದ್ದ ಎಲ್ಲ ಏಳು ಕೊಠಡಿಗಳಿಗೆ ಬೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ವಿಶ್ವಜಿತ್ ಮೇಹತಾ ಇದ್ದರು.
ಚುನಾವಣಾ ತರಬೇತಿಗೆ ಆಗಮಿಸಿದ ಎಲ್ಲರಿಗೂ ಮಧ್ಯಾಹ್ನದ ಊಟವನ್ನು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು, ಊಟದ ವ್ಯವಸ್ಥೆಗಾಗಿ ಜಿಲ್ಲಾಮಟ್ಟದಲ್ಲಿ ಟೆಂಡರ್ ನಡೆದಿತ್ತು. ಈ ಟೆಂಡರ್ ಕುಮಟಾದವರಿಗೆ ಆಗಿದ್ದು ಅವರು ಸಿದ್ದಾಪುರಕ್ಕೆ ಊಟವನ್ನು ತಂದು ನೀಡಿದ್ದರು.
ದೂರದ ಕುಮಟಾದಿಂದ ಊಟ ತರುವ ಬದಲು ತಾಲೂಕಿನಲ್ಲಿಯೇ ಟೆಂಡರ್ ಕರೆದು ನೀಡಿದ್ದರೆ ಉತ್ತಮ ಗುಣಮಟ್ಟದ ಊಟಮಾಡಬಹುದಾಗಿತ್ತು. ಬಿರುಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುವುದರ ಜತೆಗೆ ಚುನಾವಣೆಯಲ್ಲಿ ಕಾರ್ಯನಿರ್ವಹಿಸಬೇಕಾದ್ದರಿಂದ ಮುಂದಿನ ದಿನದಲ್ಲಿ ಹೀಗಾಗದಂತೆ ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ತರಬೇತಿಗೆ ಬಂದ ಹಲವು ಅಧಿಕಾರಿಗಳು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top