ಗೋಕರ್ಣ: ಬಹು ಸಂಖ್ಯಾತ ಹಾಲಕ್ಕಿ ಸಮಾಜದವರು ಮುಂದೆ ಬರಬೇಕು ಎಂದರೆ ಹಾಲಕ್ಕಿಗಳ ನಿಗಮ ಮಾಡಬೇಕು. ಇಂದಿಗೂ ಗೋಕರ್ಣದಲ್ಲಿ ಹಾಲಕ್ಕಿಗಳು ಶ್ರೀ ಮಹಾಬಲೇಶ್ವರನಿಗೆ ಅತ್ಯಂತ ಪ್ರಿಯರಾದವರು ಎಂದು ಅನುವಂಶೀಯ ಉಪಾಧಿವಂತ ಮಂಡಳದ ಅಧ್ಯಕ್ಷ ರಾಜಗೋಪಾಲ ಅಡಿ ಗುರೂಜಿ ಹೇಳಿದರು.
ಅವರು ಬೇಲೆಹಿತ್ತಲದ ಶ್ರೀ ಮಣಿಭದ್ರೇಶ್ವರ ಗೆಳೆಯರ ಬಳಗದ ಆಶ್ರಯದಲ್ಲಿ ಹಾಲಕ್ಕಿ ಸಮಾಜದವರಿಗಾಗಿ 4 ನೇ ವರ್ಷದ ಜಿಲ್ಲಾ ಮಟ್ಟದ ಹೊನಲು-ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಗೋಕರ್ಣದಲ್ಲಿ ಒಂದು ಉತ್ತಮ ಕ್ರೀಡಾಂಗಣವಿಲ್ಲ. ಇಂತಹ ಸ್ಥಳದಲ್ಲಿ ಇಂದು ಜಿಲ್ಲಾ ಮಟ್ಟದ ಕ್ರೀಡೆ ನಡೆಯಲು ಇಲ್ಲಿಯ ಸ್ವಂತ ಸ್ಥಳವನ್ನು ನೀಡಿದ್ದು ಇಂತಹ ಕಾರ್ಯಗಳ ಮೂಲಕ ಹಾಲಕ್ಕಿಗಳು ರಾಷ್ಟ್ರ ಮಟ್ಟದವರೆಗೆ ತಮ್ಮ ಪ್ರತಿಭೆ ತೋರ್ಪಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ ಸ್ವಚ್ಛ ಸುಂದರ ಗೋಕರ್ಣದ ಕನಸು ನಮ್ಮದಾಗಬೇಕು ಎಂದರು.
ಕ್ರೀಡಾಂಗಣವನ್ನು ಉದ್ಘಾಟಿಸಿದ ಉದ್ದಿಮೆದಾರ ಮಹಾಬಲೇಶ್ವರ ಜಟ್ಟು ಗೌಡ ಮಾತನಾಡಿ ಗೋಕರ್ಣ ಪುಣ್ಯ ಕ್ಷೇತ್ರ. ಇಂತಹ ಸ್ಥಳಗಳಿಗೆ ಪ್ರವಾಸಿಗರು ಬರುತ್ತಿರುತ್ತಾರೆ. ಪ್ಲಾಸ್ಟಿಕ ತ್ಯಾಜ್ಯ ಎಲ್ಲೆಂದರಲ್ಲಿ ಬೀಳುತ್ತಿದ್ದು ಯುವ ಸಮುದಾಯ ಈ ವಿಚಾರದಲ್ಲಿ ಜಾಗ್ರತಿ ವಹಿಸಬೇಕು ಎಂದರು.
ಊರ ಹಿರಿಯ ಆನಂದು ಗೌಡ ಅಧ್ಯಕ್ಷತೆವಹಿಸಿ ಮಾತನಾಡಿ ಹಾಲಕ್ಕಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ ಎನ್ನುವುದು ಚುನಾವಣಾ ಗಿಮಿಕ್.ಪ್ರತಿ ಬಾರಿ ಚುನಾವಣೆ ಬಂದಾಗ ಹೀಗೆ ಹೇಳಿ ಮತ ಪಡೆದವರು ಕೊನೆಗೆ ಎಲ್ಲಿರುತ್ತಾರೋ ತಿಳಿಯದು ಎಂದರು.
ಊರ ಹಿರಿಯರಾದ ಮಹಾಬಲೇಶ್ವರ ಗೌಡ, ಶ್ರೀ ಕಳಕಳೇಶ್ವರಿ ದೇವಸ್ಥಾನದ ಅರ್ಚಕ ವಿನಾಯಕ ಕಾಳೆ, ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಹೊನ್ನಾವರಕರ ,ನಾಗೇಶ ಗೌಡ, ಮಹಾಬಲೇಶ್ವರ ಗೌಡ,ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ರಾಮಾ ಗೌಡ, ಸುರೇಶ ಗೌಡ ವೇದಿಕೆಯಲ್ಲಿದ್ದರು.
ಪತ್ರಕರ್ತ ಸುಭಾಷ ಕಾರೇಬೈಲ ಸ್ವಾಗತಿಸಿ, ನಿರೂಪಿಸಿದರು.
ಶ್ರೀ ಮಣಿಭದ್ರೇಶ್ವರ ಗೆಳಯರ ಬಳಗದ ನರೇಂದ್ರ ಗೌಡ, ರಾಘವೇಂದ್ರ ಗೌಡ, ಗಣೇಶ್ ಗೌಡ, ರವೀಂದ್ರ ಗೌಡ, ಸೋಮಾ ಗೌಡ, ಸದಾಶಿವ ಗೌಡ, ಹರೀಶ ಗೌಡ, ಆರ್.ಪಿ.ಗೌಡ, ಕಿರಣ ಗೌಡ, ಮೂರ್ತಿ ಗೌಡ, ಸತೀಶ ಗೌಡ, ರಘು ಗೌಡ, ಕೃಷ್ಣಾ ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಈವೇಳೆ ಅಗಲಿದ ಸ್ಥಳೀಯ ಪ್ರಮುಕರಾದ ವೆಂಕಟೇಶ ಗೌಡ ರವರಿಗೆ ಮೌನಾಚರಣೆಯ ಮೂಲಕ ಚಿರಶಾಂತಿ ಕೊರಲಾಯಿತು.
ಕೋಟ್,
ಪ್ರತಿಯೊಬ್ಬರ ಬದುಕು ಕ್ಷಣಿಕ.ಭಗವಂತನ ಮುಂದೆ ನಾವೆಲ್ಲ ಚಿಕ್ಕವರು.ಆತನ ಲೀಲೆಯಂತೆ ನಾವಿರಬೇಕು. ಜಗಕೆ ಒಳಿತು ಮಾಡು ಭಗವಂತ ಎಂದು ಪ್ರಾರ್ಥಿಸುವ ಗುಣ ನಮ್ಮದಾಗಬೇಕು.
ಶ್ರೀ ರಾಜಗೋಪಾಲ್ ಅಡಿ ಗುರೂಜಿ