ಶಿರಸಿ: ಮಾದನಕೇರಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ವರದಾ ದಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಅಭ್ಯಾಸದ ಜೊತೆ ಗಿಡ ಬೆಳೆಸುವ ವಿನೂತನ ಪ್ರಯೋಗಕ್ಕೆ ಹೆಜ್ಜೆ ಇಡಲಾಗಿದೆ.
ಶಾಲಾ ಶಿಕ್ಷಕರಾದ ಸ್ಕೌಟ್ ಮಾಸ್ಟರ್ ಎನ್.ಎಸ್. ಭಾಗ್ವತ್ ತಮ್ಮ ಮನೆಯಲ್ಲಿ ತಾವೇ ಬೆಳೆದ ಕೋಕಂ ಮರದ ಬೀಜದಿಂದ 50 ಕ್ಕೂ ಹೆಚ್ಚು ಗಿಡಗಳನ್ನು ಮಾಡಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭಕ್ಕೂ ಮುನ್ನ ವಿತರಿಸಿ ಆರೈಕೆ ಮಾಡಿ ಮಳೆಗಾಲದಲ್ಲಿ ತಮ್ಮ ತಮ್ಮ ಮನೆಗಳ ತೋಟ, ಸೊಪ್ಪಿನ ಬೆಟ್ಟದಲ್ಲಿ ನೆಡುವಂತೆ ತಿಳಿಸಿ ಮಕ್ಕಳಿಗೆ ಪರಿಸರದ ಪಾಠ ಮಾಡಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.