Slide
Slide
Slide
previous arrow
next arrow

ಏ.7ಕ್ಕೆ ದಂಟಕಲ್ಲಿನಲ್ಲಿ ‘ಯಕ್ಷಸಂಜೆ’

300x250 AD

ಸಿದ್ದಾಪುರ: ತಾಲೂಕಿನ ದಂಟಕಲ್ಲಿನ ಯಕ್ಷಚಂದನ ಸಂಸ್ಥೆಯ ದಶಮಾನೋತ್ಸವ ಸಂಭ್ರಮ, ಗುರುವಂದನಾ ಹಾಗೂ ಯಕ್ಷಸಂಜೆ ಕಾರ್ಯಕ್ರಮ ಏ.7ರಂದು ಸಂಜೆ 6ಕ್ಕೆ ಗಾಳಿಜಡ್ಡಿಯ ಉಮಾಪತಿ ಹೆಗಡೆ ರಂಗಮಂದಿರದಲ್ಲಿ ಜರುಗಲಿದೆ.
ಚಲನಚಿತ್ರ ನಟ ನೀರ್ನಳ್ಳಿ ರಾಮಕೃಷ್ಣ ಕಾರ್ಯಕ್ರಮ ಉದ್ಘಾಟಿಸುವರು. ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಅಧ್ಯಕ್ಷತೆವಹಿಸುವರು. ಡಾ.ಕೃಷ್ಣಮೂರ್ತಿ ರಾಯ್ಸದ್ ಶಿರಸಿ,ಶ್ರೀಕಾಂತ ಹೆಗಡೆ ಶಿರಸಿ, ಅನಂತಮೂರ್ತಿ ಹೆಗಡೆ, ಮಹಾಬಲೇಶ್ವರ ಹೆಗಡೆ ತೀರ್ಥಹಳ್ಳಿ, ರವೀಂದ್ರ ಹೆಗಡೆ ಹಿರೇಕೈ, ರಾಘವೇಂದ್ರ ಬೆಟ್ಟಕೊಪ್ಪ, ಅಶೋಕ ಹೆಗಡೆ ಹಿರೇಕೈ, ಲಕ್ಷ್ಮೀನಾರಾಯಣ ಹೆಗಡೆ ಉಪಸ್ಥಿತರಿರುತ್ತಾರೆ.

ಗುರುವಂದನೆ: ಯಕ್ಷಗಾನ ಕಲಾವಿದ ಸತೀಶ ಉಪಾಧ್ಯ ಅಂಬಲಪಾಡಿ ಉಡುಪಿ ಅವರಿಗೆ ಗುರುವಂದನೆ ಸತೀಶ ಉಪಾಧ್ಯ ಶಿಷ್ಯಬಳಗದವರಿಂದ ಜರುಗಲಿದೆ. ನಂತರ ಯಕ್ಷಸಂಜೆ ಕಾರ್ಯಕ್ರಮದ ಅಂಗವಾಗಿ ಕಂಸವಧೆ ಯಕ್ಷಗಾನ ಜರುಗಲಿದ್ದು ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಸತೀಶ ದಂಟಕಲ್, ನಂದನ ದಂಟಕಲ್, ಶಂಕರ ಭಾಗವತ, ಶರತ ಹೆಗಡೆ ಜಾನಕೈ,ಗಣೇಶ ಗಾಂವಕರ್, ರಘುಪತಿ ಹೆಗಡೆ ಹೂಡೇಹದ್ದ ಸಹಕರಿಸುವರು. ಮುಮ್ಮೇಳದಲ್ಲಿ ಸತೀಶ ಉಪಾಧ್ಯ, ಅಶೋಕ ಭಟ್ಟ ಸಿದ್ದಾಪುರ,ನರೇಂದ್ರ ಅತ್ತಿಮುರುಡು, ವೆಂಕಟೇಶ ಬೊಗರಿಮಕ್ಕಿ, ನಿತಿನ್ ಹೆಗಡೆ, ಕಾರ್ತಿಕ್ ಹೆಗಡೆ, ಕು.ಧನಶ್ರೀ ಹೆಗಡೆ, ಕು. ಮೈತ್ರಿ ಸಂಪೇಸರ ಪಾತ್ರ ನಿರ್ವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top