ಹೊನ್ನಾವರ : ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿನದಿಂದ ದಿನ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದ್ದು,ಎರಡು ದಶಕಗಳ ನಂತರ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಎದ್ದಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಹೇಳಿದರು.
ಅವರು ಬುಧವಾರ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಹಳದೀಪುರ ಜಿಲ್ಲಾ ಪಂಚಾಯತ್‌ನ ಜೋಗ್ನಿಕಟ್ಟೆ ಮತ್ತು ಮುಗ್ವಾ ಜಿಲ್ಲಾ ಪಂಚಾಯತನ ಅರೆಅಂಗಡಿ ಭಾಗದಲ್ಲಿ ಸಂಚರಿಸಿ, ಸ್ಥಳಿಯ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಅವರೊಂದಿಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ಪರವಾದ ಅಲೆ ಇದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಅತೀಯಾದ ಆತ್ಮವಿಶ್ವಾಸದಿಂದ ಮೈಮರೆಯದೇ, ಮತದಾನದ ದಿನದವರೆಗೂ ಹಗಲು-ರಾತ್ರಿ ಪಕ್ಷದ ಗೆಲುವಿಗಾಗಿ ಪರಿಶ್ರಮಿಸುವಂತೆ ಮುಖಂಡರಿಗೆ ಕಿವಿ ಮಾತು ಹೇಳಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್.ತೆಂಗೇರಿ ಮಾತನಾಡಿ ಅಖಿಲ ಭಾರತ ಕಾಂಗ್ರೆಸ್ ಪಕ್ಷ ಅತ್ಯಂತ ಸುಶಿಕ್ಷಿತ, ಕೆನರಾ ಲೋಕಸಭಾ ಕ್ಷೇತ್ರದ ಸಮಸ್ಯೆಯ ಕುರಿತು ಲೋಕಸಭೆಯಲ್ಲಿ ಪ್ರಶ್ನೆ ಮಾಡುವ ಉತ್ತಮ ಮಹಿಳೆ ಡಾ.ಅಂಜಲಿ ನಿಂಬಾಳ್ಕರವರಿಗೆ ಟಿಕೇಟ್ ನೀಡಿದ್ದು ನಮ್ಮೇಲ್ಲರ ಪುಣ್ಯ ಎಂದರು. ಇಂತಹ ಮಹಿಳೆಯನ್ನು ಲೋಕಸಭೆಗೆ ಚುನಾಯಿಸಿ ಕಳಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ಅವರೊಂದಿಗೆ ಕೆಪಿಸಿಸಿ ಸದಸ್ಯ ಎಂ.ಎನ್.ಸುಬ್ರಮಣ್ಯ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟಣೆಯ ಜಿಲ್ಲಾ ಅಧ್ಯಕ್ಷ ವಿನೋದ ನಾಯ್ಕ, ಗ್ಯಾರಂಟಿ ಯೋಜನೆ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸತೀಶ್ ನಾಯ್ಕ, ಡಿಸಿಸಿ ಕಾರ್ಯದರ್ಶಿಗಳಾದ ರವಿ ಶೆಟ್ಟಿ ಮತ್ತು ಕಲ್ಪನಾ ನರೋನಾ,ಬ್ಲಾಕ್ ಉಪಾಧ್ಯಕ್ಷ ದಾಮೋದರ ನಾಯ್ಕ, ಕುಮಟ ಬ್ಲಾಕ್ ಅಧ್ಯಕ್ಷ ಭುವನ ಭಾಗ್ವತ್, ಜಿಲ್ಲಾ ಸೇವಾದಳದ ಕೃಷ್ಣ ಮಾರಿಮನೆ, ಮಂಜು ಮುಕ್ರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ್, ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಪಟಗಾರ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಹಿಂದುಳಿದ ವರ್ಗ ವಿಭಾಗದ ಆಧ್ಯಕ್ಷ ಕುಪ್ಪು ಗೌಡ, ಹಳದೀಪುರ ಘಟಕದ ಅಧ್ಯಕ್ಷ ಸಂಶೀರ ಶಹಾ, ನವೀಲಗೋಣ ಘಟಕದ ಅಧ್ಯಕ್ಷೆ ಮಹಾದೇವಿ ನಾಯ್ಕ, ಕಡ್ತೋಕಾ ಘಟಕದ ಅಧ್ಯಕ್ಷ ರಾಘು ದೇಶಭಂಡಾರಿ,ಕರ್ಕಿ ಘಟಕದ ಅಧ್ಯಕ್ಷ ಸತೀಶ ನಾಯ್ಕ,ಸಾಲ್ಕೋಡ ಘಟಕದ ಅಧ್ಯಕ್ಷ ಕೆ.ಎಂ. ನಾಯ್ಕ, ಚಂದಾವರ ಘಟಕದ ಅಧ್ಯಕ್ಷ ವೈ.ಆರ್.ನಾಯ್ಕ, ಕಡ್ಲೆ ಘಟಕದ ಅಧ್ಯಕ್ಷ ಪ್ರವೀಣ ನಾಯ್ಕ, ಹೊಸಾಕುಳಿ ಘಟಕದ ಅಧ್ಯಕ್ಷ ನಾಗರಾಜ್ ನಾಯ್ಕ ಇನ್ನೂ ಹಲವು ಮುಖಂಡರು ಇದ್ದರು.