Slide
Slide
Slide
previous arrow
next arrow

ದಂಡಕಾರಣ್ಯ ಇಕೋ‌ ಪಾರ್ಕಿನಲ್ಲಿ ಮಕ್ಕಳ‌ ಆಟಿಕೆ ಪರಿಕರಗಳ ಜೋಡಣೆ

300x250 AD

ದಾಂಡೇಲಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಅಧೀನದ  ನಗರದ ದಂಡಕಾರಣ್ಯ ಇಕೋ ಪಾರ್ಕಿಗೆ ಅತಿ ಅವಶ್ಯವಾಗಿ ಬೇಕಾಗಿದ್ದ ರೂ: 2.5 ಲಕ್ಷ ಮೌಲ್ಯದ ಮಕ್ಕಳ ಆಟಿಕೆ ಪರಿಕರಗಳನ್ನು ಜೋಡಿಸುವ ಕಾರ್ಯ ಮುಕ್ತಾಯಗೊಂಡಿದೆ.

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿ.ಎಸ್.ಆರ್ ಯೋಜನೆಯಡಿ ರೂ:2.5 ಲಕ್ಷ ಮೊತ್ತದಲ್ಲಿ ಅವಶ್ಯ ಮಕ್ಕಳ ಆಟಿಕೆ ಪರಿಕರಗಳನ್ನು ಜೋಡಿಸಲಾಗಿದೆ.  ದೇಶದ ಮೊಟ್ಟಮೊದಲ ಕಾರ್ಟೂನ್ ಇಕೋ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಂಡಕಾರಣ್ಯ ಇಕೋ ಪಾರ್ಕ್ ಮುಖ್ಯವಾಗಿ ಮಕ್ಕಳನ್ನು ಕೇಂದ್ರೀಕರಿಸಿಕೊಂಡು ನಿರ್ಮಿಸಲಾಗಿರುವ ಉದ್ಯಾನವನವಾಗಿದೆ.

300x250 AD

ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್ ಕುಮಾರ್ ಕೆ.ಸಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ವಲಯರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿಯವರ ನೇತೃತ್ವ, ಉಪ ವಲಯಾರಣ್ಯಾಧಿಕಾರಿ ಸಂದೀಪ್ ನಾಯ್ಕ ಅವರ ಮೇಲ್ವಿಚಾರಣೆ ಮತ್ತು ದಂಡಕಾರಣ್ಯ ಇಕೋ ಪಾರ್ಕಿನ ಸಿಬ್ಬಂದಿಗಳ ಶ್ರಮದಿಂದಾಗಿ ಹಾಗೂ ದಂಡಕಾರಣ್ಯ ಇಕೋ‌ ಪಾರ್ಕಿನ ನಿರ್ವಹಣಾ ಸಮಿತಿಯ ಸಕಾಲಿಕ ಮಾರ್ಗದರ್ಶನದಿಂದಾಗಿ ದಂಡಕಾರಣ್ಯ ಇಕೋ ಪಾರ್ಕ್ ಪ್ರಗತಿಯಡೆಗೆ ಸಾಗುತ್ತಿದೆ.

Share This
300x250 AD
300x250 AD
300x250 AD
Back to top