ದಾಂಡೇಲಿ : ನಗರದ ಹಿಂದೂ ಸಮಾಜೋತ್ಸವ ಸಮಿತಿಯ ಆಶ್ರಯದಲ್ಲಿ ಇದೇ ಬರುವ ಏಪ್ರಿಲ್ :07 ರಂದು ದಾಂಡೇಲಿ ನಗರದ ಹಳೆ ನಗರಸಭೆಯ ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಮಾಜೋತ್ಸವ ಸಮಿತಿಯ ಅಧ್ಯಕ್ಷರಾದ ವಾಸುದೇವ ಪ್ರಭು ಹೇಳಿದರು.
ಅವರು ಶನಿವಾರ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀವೆಂಕಟರಮಣ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಏಪ್ರಿಲ್ 7 ರಂದು ಸಂಜೆ 04 ಗಂಟೆಗೆ ಸರಿಯಾಗಿ ಹಳೆ ನಗರಸಭೆ ಮೈದಾನದಿಂದ ಬೃಹತ್ ಶೋಭಾ ಯಾತ್ರೆ ಆರಂಭವಾಗಲಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಹಳೆ ನಗರಸಭೆಯ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ. ಆನಂತರ ಚಿಂತಕ ಹಾಗು ವಾಗ್ಮಿಗಳಾಗಿರುವ ಪ್ರಕಾಶ್ ಮಲ್ಪೆ ಅವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ವಾಸುದೇವ ಪ್ರಭು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಘುನಾಥ್ ರಾಂದಡ್ಜಿ, ಆರೋಗ್ಯ ಭಾರತಿ ಸಮಿತಿಯ ಅಧ್ಯಕ್ಷರಾದಬ ಸುಧಾಕರ ಶೆಟ್ಟಿ, ಜಿಎಸ್‌ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಬಜರಂಗದಳದ ಜಿಲ್ಲಾ ಸುರಕ್ಷಾ ಸಮಿತಿಯ ಪ್ರಮುಖರಾದ ಚಂದ್ರು ಮಾಳಿ, ಬಜರಂಗದಳದ ಪ್ರಮುಖರಾದ ಲಿಂಗಯ್ಯ ಪೂಜಾರ ಮತ್ತು ನಾಗರಾಜ್ ಅನಂತಪುರ, ಪ್ರಮುಖರಾದ ದಯಾನಂದ ಮಲ್ಯ, ಸುರೇಶ್ ಕಾಮತ್, ವೆಂಕಟೇಶ್ ಪಾಂಡೆ, ರಾಧೆಶಾಮ್ ರಾಠಿ, ಹನುಮಂತ ಕಾರ್ಗಿ, ಸುಧಾಕರ್ ಶೆಣ್ಯೆ, ಕೆ.ಜಿ.ಶೆಣೈ, ದಯಾನಂದ್ ದೇಸಾಯಿ, ಉಮೇಶ್ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.