Slide
Slide
Slide
previous arrow
next arrow

ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಭಾಗ್ವತ್ ನಿಧನ

300x250 AD

ಯಲ್ಲಾಪುರ:  ತಾಲೂಕಿನ ನಂದೊಳ್ಳಿಯ ಪ್ರಕಾಶ ವಿಶ್ವೇಶ್ವರ ಭಾಗ್ವತ್ (ಹಬ್ನಗದ್ದೆ) ಆಕಸ್ಮಿಕವಾಗಿ ಶುಕ್ರವಾರ ಬೆಳಗಿನ ಜಾವ  ನಿಧನ ಹೊಂದಿದರು. ಅವರಿಗೆ ೫೪ ವರ್ಷವಾಗಿತ್ತು. ಮೃತರು ಪತ್ನಿ ಓರ್ವ ಪುತ್ರ ,ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೂಲತಃ ಕೊಡಸಳ್ಳಿ ಜಲವಿದ್ಯುತ್ ಯೋಜನೆಯಿಂದ ನಿರಾಶ್ರಿತರಾದ ಇವರು ನಂದೊಳ್ಳಿಯಲ್ಲಿ ಬಂದು ನೆಲಸಿದ್ದರು. ಕ್ರಿಯಾಶೀಲರಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ತೊಡಗಿಕೊಂಡು ಅಪಾರ ಜನರ ಪ್ರೀತಿಗೆ ಪಾತ್ರರಾಗಿದ್ದರು. ಮೃತರ ನಿಧನಕ್ಕೆ ಹಲವರು ಶೋಕ ವ್ಯಕ್ತಪಡಿಸಿದ್ದು ಟಿ.ಎಂ.ಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ,ಉಪಾಧ್ಯಕ್ಷ ನರಸಿಂಹ ಕೋಣೆಮನೆ,ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ,ಎಲ್ಎಸ್ಎಂಪಿ ಅಧ್ಯಕ್ಷ ನಾಗರಾಜ ಕವಡಿಕೇರಿ, ಪ್ರಮುಖರಾದ ಗಣಪತಿ‌ ಮಾನಿಗದ್ದೆ, ಟಿ.ಆರ್.ಹೆಗಡೆ, ಡಿ.ಎನ್.ಗಾಂವ್ಕಾರ್, ಶ್ರೀಧರ ಗುಮ್ಮಾನಿ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top