Slide
Slide
Slide
previous arrow
next arrow

ಕಲ್ಲೇಶ್ವರ ದೇವಾಲಯದಲ್ಲಿ ಮೋಹಕ ‘ದಕ್ಷಯಜ್ಞ’

300x250 AD

ಸಿದ್ದಾಪುರ: ತಾಲೂಕಿನ ಇರಾಸೆಯ ಕಲ್ಲೇಶ್ವರ ದೇವಾಲಯದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಹೆಗ್ಗರಣಿಯ ಶ್ರೀ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯ ಕಲಾವಿದರಿಂದ ಏರ್ಪಡಿಸಲಾದ ದಕ್ಷಯಜ್ಞ ಆಖ್ಯಾನ ಮೋಹಕವಾಗಿ ಅಭಿವ್ಯಕ್ತಿಸಲ್ಪಟ್ಟಿತು. ಈಶ್ವರನ ಪಾತ್ರದಲ್ಲಿನ ನಾಟ್ಯಾಚಾರ್ಯ ಶಂಕರಭಟ್ಟರ ಮೊದಲಿನ ತಾಂಡವ ನೃತ್ಯ, ಕೊನೆಯಲ್ಲಿನ ಕೂಪಾಟೋಪ, ದಕ್ಷನ ಪಾತ್ರದಲ್ಲಿನ ಲಕ್ಷ್ಮಿನಾರಾಯಣ ಹೆಗಡೆ ಶಿರಗುಣಿಯವರ ಗತ್ತು, ದಾಕ್ಷಾಯಣಿ ಪಾತ್ರದಲ್ಲಿನ ಸಿರಿಹೆನ್ನೆಯವರ ಭೀಭತ್ಸ ಇವೆಲ್ಲವೂ ವಿಶೇಷ ಆಕರ್ಷಣೆಯಾದವು. ಮಹಾಬಲ ನಾಯ್ಕ ಬೊಗರಿಬೈಲ್‌ರವರ ದೇವೇಂದ್ರ, ಕು|| ಕುಶನ ಅಗ್ನಿ, ವೆಂಕಟ್ರಮಣ ಹೆಗಡೆ ಮಾದನಕಳ್‌ರವರ ಬ್ರಾಹ್ಮಣ ಹಾಗೂ ಭ್ರುಗು, ಜಟ್ಟಿ ಕಡಬರವರ ವೀರಭದ್ರ ಎಲ್ಲವೂ ಮುದ ನೀಡಿದವು.
ಹಿಮ್ಮೇಳದಲ್ಲಿ ಭಾಗವತರಾಗಿ ತಿಮ್ಮಣ್ಣ ಗಾಣಗದ್ದೆ, ಮದ್ದಳೆವಾದಕರಾಗಿ ಶ್ರೀಪತಿ ಹೆಗಡೆ ಕಂಚಿಮನೆ, ಚೆಂಡೆವಾದಕರಾಗಿ ಗಂಗಾಧರ ಹೆಗಡೆ ಕಂಚಿಮನೆ ಪೂರಕ ಹಿನ್ನಲೆ ಒದಗಿಸಿದರು. ರಘುಪತಿ ನಾಯ್ಕ ಹೆಗ್ಗರಣಿ ವೇಷ-ಭೂಷಣ ಒದಗಿಸಿದ್ದರು. ಊರವರ ಯಕ್ಷಾಭಿಮಾನ ಅತ್ಯಂತ ಶೃದ್ಧೆಯಿಂದ ಕೂಡಿದ್ದು ಗಮನಾರ್ಹವಾಯಿತು.

300x250 AD
Share This
300x250 AD
300x250 AD
300x250 AD
Back to top