Slide
Slide
Slide
previous arrow
next arrow

ಅಕ್ರಮ ಮರಳು ಸಾಗಾಣಿಕೆಗೆ ಯತ್ನ; ಟೈರ್ ಹವಾ ತೆಗೆದು ಲಾರಿ ಸಾಗಾಟಕ್ಕೆ ತಡೆ

300x250 AD

ಹೊನ್ನಾವರ: ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೆಟ್ಟೆ ಸಮುದ್ರದ ಅಂಚಿನಲ್ಲಿ ಸಿಲಿಕಾನ್ ಸ್ಯಾಂಡ್ (ಸಮುದ್ರದ ಅಂಚಿನ ಮರಳು) ಸಾಗಾಟಕ್ಕೆ ಪ್ರಯತ್ನ ನಡೆಸಿದಾಗ, ಸ್ಥಳೀಯರ ವಿರೋಧ ವ್ಯಕ್ತಪಡಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸಮುದ್ರದ ಅಂಚಿನಲ್ಲಿರುವ ಮರಳನ್ನು ಸಾಗಾಟ ಮಾಡಲು, ಐದು ಟಿಪ್ಪರ ವಾಹನ, ಒಂದು ಹಿಟಾಚಿ ಸಮೇತ ದೊಡ್ಡ ಮಟ್ಟದಲ್ಲಿ ಮರಳು ಸಾಗಾಟ ಮಾಡಲು ಸಂಬಂಧ ಪಟ್ಟವರು ಆಗಮಿಸಿ ಮರಳು ತುಂಬಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಸ್ಥಳೀಯ ಸಾರ್ವಜನಿಕರ ದಿಢೀರ್‌ ಪ್ರತಿಭಟನೆ ಮಾಡಿ ವಾಹನದ ಟೈಯರ್ ನ ಗಾಳಿ ತೆಗೆದು, ವಾಹನ ತಡೆದು ಮರಳು ಸಾಗಾಟಕ್ಕೆ ತಡೆ ಒಡ್ಡಿದ್ದಾರೆ. ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ಮರಳು ಸಾಗಾಟಕ್ಕೆ ಬಂದವರು ಸ್ಥಳದಿಂದ ಪಲಾಯನಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಮರಳಿಗೆ ಸಂಬಂಧ ಪಟ್ಟವರು ಸ್ಥಳಕ್ಕೆ ಬರಬೇಕು ಎಂದು ಸ್ಥಳೀಯ ಜನರು ಪಟ್ಟು ಹಿಡಿದಿರುವ ಘಟನೆ ನಡೆದಿದೆ. ಬೆಳಿಗ್ಗೆ ತನಕವು ವಾಹನ ಸ್ಥಳದಲ್ಲೇ ತಡೆದು ನಿಲ್ಲಿಸಲಾಗಿದೆ.

ಹಳದಿಪುರ, ಗೋಳಿಬೆಟ್ಟೆ ಸಮುದ್ರದ ಅಂಚಿನಿಂದ ಮರಳು ತುಂಬಿ ಅಲ್ಲಿಂದ ಕೋಣಕಾರ ಹತ್ತಿರ ಸಾಗಾಟ ಮಾಡಿ ಅಲ್ಲಿಂದ ಹೊರ ಜಿಲ್ಲೆಗೆ ಸಾಗಾಟ ಮಾಡಲಾಗುತ್ತಿತ್ತು. ಮರಳು ಸಾಗಾಟಕ್ಕೆ ಹೊರ ಜಿಲ್ಲೆಯ ಹಲವು ಬಾರಿ ವಾಹನ ಸ್ಥಳಕ್ಕೆ ಬಂದು ಜಮಾವಣೆ ಆಗಿತ್ತು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿರುವುದಾಗಿ ತಿಳಿದುಬಂದಿದೆ.

300x250 AD

ಈ ಅಕ್ರಮ ಮರಳು ದಂದೆ ನಡೆಯುವ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಭೂ ಮತ್ತು ಗಣಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮರಳು ಸಾಗಾಟ ಮಾಡದಂತೆ ತಡೆಯಬೇಕು ಸಂಬಂಧ ಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top