ಸಿದ್ದಾಪುರ: ಪ್ರಭಾವಿ ಮಾಧ್ಯಮದಲ್ಲಿ ಒಂದಾದ ಸಿನಿಮಾ ಮಾಧ್ಯಮದಲ್ಲಿ ಛಾಪು ಮೂಡಿಸಿದ ಹಲವಾರು ಪ್ರತಿಭೆಗಳ ಮೂಲ ರಂಗಭೂಮಿಯೇ ಆಗಿದ್ದು, ರಂಗಭೂಮಿ ಹಲವಾರು ಪ್ರತಿಭೆಗಳನ್ನು ಹುಟ್ಟುಹಾಕಿದೆ ಎಂದು ಟಿಎಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಒಡ್ಡೋಲಗದಿಂದ ವಿವೇಕ ಶಾನಭಾಗ ರಚನೆಯ ಬಹುಮುಖಿ ನಾಟಕ ಪ್ರದರ್ಶನದ ಪೂರ್ವದಲ್ಲಿ ಆಯೋಜಿಸಿದ್ದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು. ರಂಗಾಯಣ, ನೀನಾಸಂನಂತಹ ಸಂಸ್ಥೆಗಳಿಂದ ಹೊರ ಹೊಮ್ಮಿದ ಅನೇಕ ಪ್ರತಿಭೆಗಳು ಸಿನಿಮಾ ರಂಗವನ್ನು ಹಾಗೂ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಹೇಳಿದರು.
ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ.ಹೆಗಡೆ ಅಧ್ಯಕ್ಷತೆವಹಿಸಿದ್ದರು. ಅಶೋಕ ಜಿ.ಹೆಗಡೆ ಹಿರೇಕೈ, ಸತೀಶ ಹೆಗಡೆ ದಂಟಕಲ್, ಸಿ.ಎನ್.ಹೆಗಡೆ ಹೊನ್ನೆಹದ್ದ, ಎಸ್.ಆರ್.ಹೆಗಡೆ ಕುಂಬಾರಕುಳಿ, ಅನಂತ ಶಾನಭಾಗ ಹಾರ್ಸಿಕಟ್ಟಾ ಉಪಸ್ಥಿತರಿದ್ದರು.
ನಂತರ ವಿವೇಕ ಶಾನಭಾಗ ರಚನೆಯ ಗಣಪತಿ ಹೆಗಡೆ ಹಿತ್ಲಕೈ ನಿರ್ದೇಶನದ ಬಹುಮುಖಿ ನಾಟಕ ಪ್ರದರ್ಶನಗೊಂಡಿತು.ನಾಗರಾಜ ಬರೂರು, ಕೇಶವ ಹೆಗಡೆ ಕಿಬ್ಳೆ,ಪುಷ್ಪಾ ರಾಘವೇಂದ್ರ ಸಾಗರ, ಮಾಧವ ಶರ್ಮಾ ಕಲಗಾರ, ಪ್ರಸನ್ನಕುಮಾರ ಎನ್.ಎಂ.ಸಾಗರ, ಗಣಪತಿ ಬಿ.ಹಿತ್ಲಕೈ, ಶ್ರೀರಾಮ ಯು.ಗೌಡ, ಸಂಧ್ಯಾ ಶಾಸ್ತ್ರಿ ಭೈರುಂಬೆ, ನವೀನಕುಮಾರ ಕುಣಜಿ, ಪ್ರೀತಿ ಹೆಗಡೆ, ನಂದಿತಾ ಭಾಗ್ವತ್, ಯೋಗೇಶ ಕುಣಜಿ, ಮುರುಗೇಶ ಬಸ್ತಿಕೊಪ್ಪ ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು. ಗಣಪತಿ ಹೆಗಡೆ ವಡ್ಡಿನಗದ್ದೆ ಸಹಕರಿಸಿದರು. ಪ್ರಜ್ಞಾ ಹೆಗಡೆ, ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.