Slide
Slide
Slide
previous arrow
next arrow

ಖ್ಯಾತ‌ ಜಲತರಂಗ ವಾದಕ ಪಂ.ರಾಜಾರಾಮ ಹೆಗಡೆ‌ ವಿಧಿವಶ

300x250 AD

ಸಿದ್ದಾಪುರ: ನಾಡಿನ ಖ್ಯಾತ ಜಲತರಂಗ ವಾದಕರಾಗಿದ್ದ ಸಿದ್ದಾಪುರ ತಾಲೂಕಿನ ಹೆಗ್ಗಾರಿನ ಪಂ. ರಾಜಾರಾಮ (ರಾಜು) ಹೆಗಡೆ ಹೆಗ್ಗಾರ‌ ಮಾ.20 ರಂದು ಇಹಲೋಕ ತ್ಯಜಿಸಿದ್ದಾರೆ.

ಅಲ್ಪಕಾಲೀನ ಅನಾರೋಗ್ಯದಿಂದ ರಾಜು ಹೆಗಡೆ ಅವರು ಬಳಲುತ್ತಿದ್ದರೆಂದು‌‌ ತಿಳಿದುಬಂದಿದ್ದು, ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಿರಳವಾದ ಸಂಗೀತ ಕಲೆಯಾದ ಜಲತರಂಗ ವಾದನದಲ್ಲಿ ರಾಜು ಹೆಗಡೆ ಹೆಗ್ಗಾರ ಅವರು ಸುಮಾರು 25ಕ್ಕೂ ಹೆಚ್ಚಿನ ವರ್ಷಗಳಿಂದ ತೊಡಗಿಸಿಕೊಂಡಿದ್ದು, ರಾಜ್ಯದಲ್ಲಿಯೇ ಪ್ರಥಮವಾಗಿ ಜಲತರಂಗ ವಾದಕರಾಗಿ ಗುರುತಿಸಿಕೊಂಡು ರಾಜ್ಯದ ವಿವಿಧ ಕಡೆಗಳಲ್ಲಿ ಹಾಗೂ ವಿವಿಧ ರಾಜ್ಯಗಳಲ್ಲಿ ಕಾರ್ಯಕ್ರಮವನ್ನು ನೀಡಿ ಮೆಚ್ಚುಗೆ ಗಳಿಸಿದ್ದರು. ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಎದೆತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ನಿರ್ಣಾಯಕರಾಗಿ ಕೂಡ ಭಾಗವಹಿಸಿದ್ದರು.

300x250 AD

ರಾಜು ಹೆಗಡೆ ನಿಧನದಿಂದ ಸಂಗೀತ ಲೋಕವು ಒಬ್ಬ ಸಾಧಕರನ್ನು ಕಳೆದುಕೊಂಡಿದೆ.ರಾಜಣ್ಣ ಅವರ ಕುಟುಂಬವರ್ಗ ನಿಕಟವರ್ತಿಗಳು ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ- ಗುರುಪ್ರಸಾದ ಹೆಗಡೆ ಹರ್ತೆಬೈಲ್

Share This
300x250 AD
300x250 AD
300x250 AD
Back to top