ಯಲ್ಲಾಪುರ: ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ ಗ್ಯಾರಂಟಿ ಯೋಜನೆಗೆ ಸಮಿತಿ ರಚಿಸಿದ್ದು, ಸಮರ್ಪಕ ಅನುಷ್ಠಾನಕ್ಕೆ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಗ್ಯಾರಂಟಿ ಸಮಿತಿ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ ಹೇಳಿದರು.
ಅವರು ಈ ಕುರಿತು ಬುಧವಾರ ಮಾಹಿತಿ ನೀಡಿ,ಕೇವಲ ಅಧಿಕಾರಿಗಳಿಂದ ಯೋಜನೆ ಪೂರ್ಣಪ್ರಮಾಣದಲ್ಲಿ ಪರಿಣಾಮಕಾರಿ ಜಾರಿಯಾಗದ ಹಿನ್ನೆಲೆಯಲ್ಲಿ ಗ್ಯಾರಂಟಿ ಸಮಿತಿ ರಚಿಸಿದ್ದು, ಪ್ರತಿ ಗ್ರಾಪಂ ಹಾಗೂ ಪಟ್ಟಣದಲ್ಲಿ ಗ್ಯಾರಂಟಿ ಯೋಜನೆಯ ಸ್ಥಿತಿಗತಿ,ಉಂಟಾಗುತ್ತಿರುವ ತೊಂದರೆಯ ಬಗ್ಗೆ ಆಲಿಸಿ ಪರಿಹರಿಸಲಾಗುತ್ತದೆ. ಅರ್ಹರು ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಮಿತಿಯ ೧೫ ಜನ ಸದಸ್ಯರು ಸಭೆ ಸೇರಿ ಯೋಜನೆ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದರು. ಪಡಿತರಕ್ಕೆ ಸಂಬಂಧಿಸಿದಂತೆ ಸರ್ವರ್ ಅಪಡೇಟ್ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಸಭಾ ಚುನಾವಣೆಗೂ ಗ್ಯಾರಂಟಿಗೂ ಸಂಬಂಧ ಇಲ್ಲ.ಗ್ಯಾರಂಟಿ ಮುಂದುವರಿಯುತ್ತದೆ ಎಂದರು.
ಬ್ಲಾಕ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ್ ಮಾತನಾಡಿ, ಲೋಕಸಭಾ ಚುನಾವಣೆಗೆ ಪಕ್ಷ ಸಿದ್ದತೆಯಲ್ಲಿದ್ದು, ಕಾರ್ಯಕರ್ತರು ಒಗ್ಗೂಡಿ ಚುನಾವಣೆ ಎದುರಿಸಲು ಸನ್ನದ್ದವಾಗಿದೆ ಎಂದರು.
ಸಮಿತಿಯ ಟಿ.ಸಿ.ಗಾಂವ್ಕಾರ, ಫಕೀರ್ ಹರಿಜನ,ಎಂ.ಕೆ.ಭಟ್ಟ ಯಡಳ್ಳಿ, ಗ್ಯಾರಂಟಿ ಸಮಿತಿ ಕಾರ್ಯದರ್ಶಿ ಅನಿಲ್ ಮರಾಠೆ, ಸೋಷಿಯಲ್ ಮೀಡಿಯಾ ತಾಲೂಕಾ ಅಧ್ಯಕ್ಷೆ ಮುಷರತ್ ಖಾನ್, ಸೇವಾದಳ ಜಿಲ್ಲಾಧ್ಯಕ್ಷೆ ಆಯಿಷಾ ಗೋಜನೂರು,ಪ್ರಮುಖ ವಿ.ಎಸ್.ಭಟ್ ಇದ್ದರು.