Slide
Slide
Slide
previous arrow
next arrow

ಮನುವಿಕಾಸದಿಂದ‌ ಮಲೆನಾಡಿನ‌ ಸಣ್ಣಕೆರೆಗಳ ಪುನರುಜ್ಜೀವನ ಕಾರ್ಯಕ್ರಮ

300x250 AD

ಶಿರಸಿ: ಮನುವಿಕಾಸ ಸಂಸ್ಥೆಯು ಹಾವೇರಿ, ಧಾರವಾಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ ರೈತರ ಸಹಭಾಗಿತ್ವದೊಂದಿಗೆ 270 ಕ್ಕೂ ಅಧಿಕ ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸಿದೆ.

ಪ್ರಸ್ತುತ ದಿನಮಾನಗಳಲ್ಲಿ ಮಲೆನಾಡಿನ ಭಾಗಗಳಲ್ಲಿ ಉಂಟಾಗುತ್ತಿರುವ ನೀರಿನ ಸಮಸ್ಯೆಯನ್ನು ಮನಗಂಡು ಮನುವಿಕಾಸ ಸಂಸ್ಥೆಯವರು ಶಿರಸಿ ಮತ್ತು ಸಿದ್ದಾಪುರ ತಾಲೂಕು ವ್ಯಾಪ್ತಿಯಲ್ಲಿನ 2 ರಿಂದ 10 ಗುಂಟೆ ವಿಸ್ತೀರ್ಣದ ಗ್ರಾಮ ಪಂಚಾಯತಿಯ ಅಧೀನದಲ್ಲಿರುವ ಸಣ್ಣಕೆರೆಗಳನ್ನು ಅಭಿವೃದ್ಧಿಪಡಿಸಲು ಉತ್ಸುಕರಾಗಿದ್ದಾರೆ.

ಹೂಳೆತ್ತಿದ ಮಣ್ಣನ್ನು ಗ್ರಾಮಸ್ಥರು ತಮ್ಮ ಹೊಲಗಳಿಗೆ ಅಥವಾ ಬೇರೆಡೆಗೆ ಸ್ವಂತ ಖರ್ಚಿನಲ್ಲಿ ಸಾಗಿಸಬೇಕಾಗುತ್ತದೆ. ಹೂಳೆತ್ತಲು ಅಗತ್ಯವಿರುವ ಹಿಟಾಚಿ ಮಷೀನ್‌ಗಳನ್ನು ಮೂರರಿಂದ ನಾಲ್ಕು ದಿನಗಳವರೆಗೆ ಉಚಿತವಾಗಿ ಒದಗಿಸಲಾಗುತ್ತದೆ. ಒಂದು ವೇಳೆ ಊರ ಗ್ರಾಮಸ್ಥರು ಹಿಟಾಚಿ ಮಷೀನ್ ಗಳಿಗೆ ಡೀಸೆಲ್ ಪೂರೈಕೆ ಮಾಡಿದ್ದಲ್ಲಿ ಇನ್ನು ಹೆಚ್ಚಿನ ದಿನಗಳವರೆಗೆ ಪೂರೈಸಲಾಗುತ್ತದೆ ಆಸಕ್ತ ರೈತರು ಈ ಕೆಳಗಿನ ದೂರವಾಣಿಗೆ ಸಂಪರ್ಕಿಸತಕ್ಕದ್ದು.

300x250 AD

ಮಂಜುನಾಥ ಹೆಗಡೆ –Tel:+919449453774
ಅಶ್ವಥ ನಾಯ್ಕ –Tel:+919480713662
ಪುನೀತ್ ನಾಯ್ಕ –Tel:+919686224908
ಶ್ರೀಕಾಂತ್ ಹೆಗಡೆ –Tel:+919449524860
ಬಾಲಚಂದ್ರ ಗೌಡ –Tel:+919480416732
ನಾಗರಾಜ ಹಸ್ಲರ್ –Tel:+917022763799

ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ‌ ಸ್ಥಳಕ್ಕೆ ಭೇಟಿ ನೀಡಿ ಕೆರೆ ಹೂಳೆತ್ತುವ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಲಾಗಿದೆ.

Share This
300x250 AD
300x250 AD
300x250 AD
Back to top