ಶಿರಸಿ: ರಾಜ್ಯದ ಅತಿದೊಡ್ಡ ಜಾತ್ರೆಯಾದ ಶಿರಸಿ ಮಾರಿಕಾಂಬಾ ಜಾತ್ರಾ ರಥೋತ್ಸವವು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ಸಾಗಿದೆ.
ಮಂಗಳವಾರ ರಾತ್ರಿ ಕಲ್ಯಾಣೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆದಿದ್ದು, ಬುಧವಾರ ಬೆಳಿಗ್ಗೆ ಮಾರಿಕಾಂಬಾ ದೇವಸ್ಥಾನದಿಂದ ಎದುರಿನಲ್ಲಿ ವಿವಿಧ ಧಾರ್ಮಿಕ ಸಂಪ್ರದಾಯಗಳ ನಂತರ ರಥಾರೂಢಳಾದ ಶಕ್ತಿದೇವತೆಯ ರಥೋತ್ಸವವು 8.57ರ ವೇಳೆಗೆ ಪ್ರಾರಂಭವಾಗಿದೆ. ರಥದಲ್ಲಿ ವಿರಾಜಮಾನಳಾದ ದೇವಿಯನ್ನು ರಸ್ತೆಯ ಇಕ್ಕೆಲದಲ್ಲಿ ನಿಂತು ಭಕ್ತರು ಭಕ್ತಿಯಿಂದ ವೀಕ್ಷಿಸಿ ಬಾಳೆ ಹಣ್ಣು, ಹರಕೆ ಕೋಳಿ, ಕಡಲೆ ಎಸೆದು ಹರಕೆ ಸಲ್ಲಿಸುತ್ತಿದ್ದಾರೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಿ ಬಿಡಕಿ ಬಯಲಿನಲ್ಲಿ ಗದ್ದುಗೆ ಏರಲಿದ್ದು, ಗುರುವಾರ ಬೆಳಿಗ್ಗೆ 5 ರಿಂದ ಮಾ.27ರ ಬೆಳಿಗ್ಗೆ 10ರ ತನಕ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶವಿದೆ. ರಥೋತ್ಸವದಲ್ಲಿ ಮೂವತ್ತು ಸಾವಿರಕ್ಕೂ ಅಧಿಕ ಭಕ್ತರು ಸೇರಿದ್ದಾರೆ.