Slide
Slide
Slide
previous arrow
next arrow

ಮಾ.17ಕ್ಕೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ

300x250 AD

ಸಿದ್ದಾಪುರ : ಪಟ್ಟಣದ ಅಶೋಕ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಾಲಯದಲ್ಲಿ  ಮಾ.17, ರವಿವಾರ  ಮಧ್ಯಾಹ್ನ 3:30 ಗಂಟೆಯಿಂದ  ಸಿದ್ದಾಪುರ ದೈವಜ್ಞ ಬ್ರಾಹ್ಮಣ ಸರಾಫ ಸಂಘದ ಆಶ್ರಯದಲ್ಲಿ  ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗಳ ಕುರಿತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮ ನಡೆಯಲಿದ್ದು, ಸಿದ್ದಾಪುರ ದೈವಜ್ಞ ಬ್ರಾಹ್ಮಣ ಸಮಾಜಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಂತರಾಮ್ ವೆಂಕಟೇಶ್ ಶೇಟ್ ಉದ್ಘಾಟಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ  ನಿವೃತ್ತ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳಾದ ದೇವಿ ದಾಸ ವಿಘ್ನೇಶ್ವರ ಶೇಟ್, ಹಾಗೂ ತರಬೇತುದಾರರು, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉತ್ತರ ಕನ್ನಡದ ಪ್ರಶಾಂತ್ ಗಣಪತಿ ಆಚಾರ್ಯ  ಇವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.ದೈವಜ್ಞ ಬ್ರಾಹ್ಮಣ ಯುವಕ ಸಂಘದ ಅಧ್ಯಕ್ಷ ಪ್ರಶಾಂತ  ದತ್ತಾತ್ರೇಯ ಶೇಟ್,  ದೈವಜ್ಞ ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿಜಯ ರಾಮದಾಸ್ ರಾಯ್ಕರ್, ವಿದ್ಯಾ ಪ್ರೋತ್ಸಾಹಕ ನಿಧಿ ಸಮಿತಿಯ ಅಧ್ಯಕ್ಷ ಸಾಯಿನಾಥ ಸದಾಶಿವ್ ಅಣವೇಕರ ರವರು  ಅತಿಥಿಗಳಾಗಿ  ಉಪಸ್ಥಿತರಿರುವರು.ಸಿದ್ದಾಪುರ ದೈವಜ್ಞ ಬ್ರಾಹ್ಮಣ ಸರಾಫ ಸಂಘದ ಅಧ್ಯಕ್ಷ ದಿವಾಕರ್ ಕಾಳು ರೇವಣಕರ್  ರವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರಗಲಿದೆ  ಎಂದು  ದೈವಜ್ಞ ಸರಾಫ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಡಿ. ಶೇಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top