ಹೊನ್ನಾವರ : ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಶಿಯಲ್ಲಿ ಇತ್ತೀಚಿಗೆ ಕ್ರೀಡಾದಿನವನ್ನು ಆಚರಿಸಲಾಯಿತು.
ಶಾಲಾ ವಿದ್ಯಾರ್ಥಿಗಳ ಕ್ರೀಡೆಯ ಸಾಂಸ್ಕೃತಿಕ ದಿನವನ್ನು ಚರ್ಚ್ ಫಾದರ ಓಲ್ಟನ್ ಉದ್ಘಾಟಿಸಿ ಕ್ರೀಡೆಯು, ಪ್ರತಿಯೊಬ್ಬ ಮನುಷ್ಯರಿಗೂ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಕ್ರೀಡೆಗೂ ಮಹತ್ವ ನೀಡಬೇಕು ಎಂದು ಕರೆ ನೀಡಿದರು.
ಪ್ರಾರಂಭದಲ್ಲಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಅರುಣ್ ಕುಮಾರ್ ಒಲಪಿಂಕ್ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಕುರಿತು ಅತಿಥಿಗಳಾದ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀಮತಿ ಸಾಧನಾ ಬರ್ಗಿ, ಯುವಜನ ಸೇವಾ ಕ್ರೀಡಾಧಿಕಾರಿಯಾದ ಸುದೀಶ ನಾಯ್ಕ ಕಾರ್ಯಕ್ರಮದ ಕುರಿತು ಮಾತನಾಡಿದರು. ಹೆನ್ರಿ ಮಿರಾಂಡಾ, ಜೈವಂತ ಪೈ, ಉಪಸ್ಥಿತರಿದ್ದರು. ಕ್ರೀಡೆಯ ಚಟುವಟಿಕೆಯಾದ ಡೆಂಬಲ್ಸ್, ಹೂಪ್ಸ್,ಲೇಝೀಮ್ ಹಾಗೂ ಪಿರಾಮಿಡ್‌ಗಳ ಆಕರ್ಷಣಿಯ ಪ್ರದರ್ಶನ ವಿದ್ಯಾರ್ಥಿಗಳಿಂದ ನಡೆಯಿತು.ಮು.ಶಿ. ಭಾರತಿ ಹೆಗಡೆ ಸ್ವಾಗತಿಸಿದರು.ಕಾರ್ಯಕ್ರಮ ಸಂಘಟಿಸಿದ ದೈ.ಶಿ.ಶಿಕ್ಷಕರಾದ ಎಸ್.ಎಮ್.ಲೋಪಿಸ್ ಸರ್ವರನ್ನು ವಂದಿಸಿದರು.ಎಲ್ಲಾ ಶಿಕ್ಷಕರು ಸಹಕರಿಸಿದರು.