Slide
Slide
Slide
previous arrow
next arrow

ಮಾ.16ಕ್ಕೆ ಉಪನ್ಯಾಸ

300x250 AD

ಶಿರಸಿ: ‘ ಪರಸ್ಪರ ಸಂಬಂಧಗಳ ಮೂಲಕವೇ ಸಂತೋಷವಾಗಿರುವುದು ಹೇಗೆ?’ ಎಂಬ ಕುರಿತು ಉಪನ್ಯಾಸ, ಚಟುವಟಿಕೆಗಳು, ಸಂವಾದ ಕಾರ್ಯಕ್ರಮ ಮಾ.16ರಂದು ಬೆಂಗಳೂರಿನ ಆನಂದರಾವ್ ವೃತ್ತ ಬಳಿಯ ಕ.ವಿ.ಪ್ರ.ನಿ. ಲೆಕ್ಕಾಧಿಕಾರಿಗಳ ಸಂಘಟನೆಯ ಬೆಳ್ಳಿ ಭವನದಲ್ಲಿ ನಡೆಯಲಿದೆ.

ಈ ಅಪರೂಪದ ಸಂದರ್ಭದಲ್ಲಿ ಪ್ರಾಫಿಟ್ ಪ್ಲಸ್ ಪತ್ರಿಕಾ ಬಳಗದವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಪತ್ರಿಕೆಯ ಸಂಪಾದಕಿ ಸುಧಾ ಶರ್ಮ ಚವತ್ತಿ, ಮಾಧ್ಯಮ ಸಲಹೆಗಾರರು, ಹಿರಿಯ ಪತ್ರಕರ್ತೆ ಮಾಲತಿ ಭಟ್, ಆಧ್ಯಾತ್ಮಿಕ ಚಿಂತಕಿ, ಕಾದಂಬರಿಗಾರ್ತಿ ಶೋಭಾ ಹೆಗಡೆ, ಜೀವನ ಕೌಶಲ್ಯ ತರಬೇತಿದಾರರು ಹಾಗೂ ಅಂಕಣಕಾರರು ಚಿತ್ರ ಸಿ., ಲೇಖಕಿ ಹಾಗೂ ಆಪ್ತ ಸಲಹೆಗಾರರು ಡಾ. ಶಾಂತಾ ನಾಗರಾಜ್ ಭಾಗವಹಿಸಲಿದ್ದಾರೆ. ಆಸಕ್ತರು ಆಗಮಿಸಿ ಪ್ರೋತ್ಸಾಹಿಸ ಬೇಕೆಂದು ಸಂಘಟನೆಯ ಪದಾಧಿಕಾರಿಗಳಾದ ಕೆ.ರಾಮಚಂದ್ರ ರೆಡ್ಡಿ ಹಾಗೂ ವಿ.ಪಿ.ಗಾಯತ್ರಿ ಅವರುಗಳು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top