Slide
Slide
Slide
previous arrow
next arrow

ಗ್ಯಾರಂಟಿ ಯೋಜನೆಗಳಿಂದ ಬದುಕು ಹಸನಾದವರ ಸಮಾವೇಶ

300x250 AD

ವಿಶೇಷ ಲೇಖನ: ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಪ್ರಜೆಗಳ ಯೋಗಕ್ಷೇಮ, ಅವರಿಗೆ ನೆಮ್ಮದಿಯ ಬದುಕು ಹಾಗೂ ಎಲ್ಲರಿಗೂ ಭದ್ರತೆ ಒದಗಿಸುವುದೇ ಆಡಳಿತದ ಅಂತಿಮ ಗುರಿಯಾಗಿದೆ. ಸಂವಿಧಾನದ ತತ್ವಗಳಡಿಯಲ್ಲಿ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ, ರಾಜ್ಯದ ಜನತೆಯ ಸರ್ವಾನುಮತದ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರವು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನ, ಆರೋಗ್ಯ, ಶಿಕ್ಷಣ, ಉದ್ಯೋಗ ದೊರಯಬೇಕು ಎಂಬ ಅಂತ:ಕರಣದ ಕಾಳಜಿಯ ದ್ಯೋತಕವಾಗಿ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ ಎಲ್ಲಾ ವರ್ಗಗಳ ಹಾಗೂ ಸಮುದಾಯಗಳ ಸರ್ವತೋಮುಖ ಅಭ್ಯುದಯಕ್ಕಾಗಿ ಕಂಕಣ ಬದ್ದವಾಗಿದೆ.
ಪ್ರಗತಿ ಒಂದು ನಿರಂತರ ಪ್ರಕ್ರಿಯೆ, ಈ ಹಾದಿಯಲ್ಲಿ ಯಾರು ಅವಕಾಶ ವಂಚಿತರಾಗಬಾರದು. ಸಮಾಜದ ಪ್ರತಿಯೊಬ್ಬರಿಗೂ ಪ್ರಗತಿಯ ಫಲಗಳು ತಲುಪಬೇಕು. ಎಲ್ಲರೂ ಅಭಿವೃದ್ದಿಯ ಪಾಲುದಾರರಾಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ.

ಸರ್ಕಾರವು ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನರಿಗೆ ಭರಸವೆ ನೀಡಿದ್ದ ಐದೂ ಗ್ಯಾರಂಟಿಗಳನ್ನು, ಅಧಿಕಾರಕ್ಕೆ ಬಂದ ನಂತರ ಅಕ್ಷರಶ: ಜಾರಿಗೊಳಿಸಲಾಗಿದೆ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನ ಸಾಮಾನ್ಯರ ಜೀವನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದ್ದು, ರಾಜ್ಯದ ಎಲ್ಲಾ ಸ್ಥರದ ಜನರ ಜೀವನ ಮಟ್ಟವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಗಿವೆ. ನಾಡಿನ ಜನತೆಯ ಸಾಮಾಜಿಕ, ಆರ್ಥಿಕ ಚೈತನ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯಡಿ ಕೈಗೊಂಡಿರುವ ಐದೂ ಗ್ಯಾರಂಟಿ ಯೋಜನೆಗಳು ರಾಜ್ಯದ 1.30 ಕೋಟಿಗೂ ಅಧಿಕ ಕುಟುಂಬಗಳ, 4 ಕೋಟಿ 60 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ತಲುಪುತ್ತಿವೆ. ರಾಜ್ಯದ ಶೇ.96 ಕ್ಕೂ ಅಧಿಕ ಜನರು ಒಂದು ಅಥವಾ ಅದಕ್ಕಿಂತ ಹೆಚ್ಚು ಗ್ಯಾರಂಟಿ ಯೋಜನೆಗಳ ಅನುಕೂಲವನ್ನು ಪಡೆಯುತ್ತಿದ್ದಾರೆ. ಇಷ್ಟು ವ್ಯಾಪಕ ಪ್ರಮಾಣದಲ್ಲಿನ ಈ ಯೋಜನೆಯ ಸವಲತ್ತುಗಳು ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೇ ನೇರವಾಗಿ ಜನತೆಯ ಮನೆಗಳಿಗೆ ತಲುಪುತ್ತಿವೆ. ಈ ಯೋಜನೆಗಳು ದೇಶದಾದ್ಯಂತ ಕರ್ನಾಟಕ ಮಾದರಿ ಅಭಿವೃದ್ದಿ ಎಂದು ಖ್ಯಾತಿ ಪಡೆದಿವೆ.

ಇದೇ ಮಾರ್ಚ್ 16, 17 ರಂದು ಕಾರವಾರದ ರವೀಂದ್ರನಾಥ ಠಾಗೂರ್ ಕಡಲ ತೀರದಲ್ಲಿ, ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಜಿಲ್ಲೆಯ 25000 ಕ್ಕೂ ಅಧಿಕ ಫಲಾನುಭವಿಗಳು ಭಾಗವಹಿಸುತ್ತಿದ್ದು, ಇದಕ್ಕಾಗಿ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಹಾಗೂ ಲಿಂಗತ್ವ ಅಲ್ಪ ಸಂಖ್ಯಾತರಿಗೆ ರಾಜ್ಯಾದ್ಯಂತ ಸರ್ಕಾರಿ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸುವ ಶಕ್ತಿ ಯೋಜನೆಯು ನಿಜಾರ್ಥದಲ್ಲಿ ಮಹಿಳೆಯರ ಮತ್ತು ನಾಡಿನ ಸಬಲೀಕರಣಕ್ಕೆ ಪುಷ್ಠಿ ನೀಡಿದ್ದು, ಈ ಯೋಜನೆಯು ನಾಡಿನ ಆರ್ಥಿಕ ಶಕ್ತಿಗೆ ಪೂರಕವಾಗಿದೆ. ಅಲ್ಲದೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಶಂಸೆಗೆ ಕೂಡಾ ಕಾರಣವಾಗಿದೆ. ಶಕ್ತಿ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 2023 ರಿಂದ ಇದುವರೆಗೆ 4.39 ಕೋಟಿ ಗೂ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸಿದ್ದು, ಇದರ ಒಟ್ಟು ಟಿಕೆಟ್ ಮೌಲ್ಯ 125.46 ಕೋಟಿ ರೂ.ಗಳಿಗೂ ಅಧಿಕವಾಗಿದೆ.

ಆಗಸ್ಟ್ 2023 ರಿಂದ ಜಾರಿಗೆ ಬಂದ ಪ್ರತೀ ಕುಟುಂಬಕ್ಕೆ ಗರಿಷ್ಠ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯಡಿ, ಇದುವರೆಗೆ ಜಿಲ್ಲೆಯಲ್ಲಿ 3,78,748 ಕುಟುಂಬಗಳನ್ನು ನೊಂದಣಿ ಮಾಡಿ ಶೇ.100 ಸಾಧನೆ ಮಾಡಲಾಗಿದ್ದು, ಈ ಯೋಜನೆಯಡಿ ಇದುವರೆಗೆ 115.59 ಕೋಟಿ ಮೊತ್ತದ ಉಚಿತ ವಿದ್ಯುತ್ ಸರಬರಾಜು ಮಾಡಲಾಗಿದೆ. ನೊಂದಣಿಗೆ ನಿರಾಸಕ್ತಿ ತೋರಿರುವ ಕುಟುಂಬಗಳನ್ನು ಈ ಯೋಜನೆಗೆ ನೊಂದಣಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಸಿವು ಮುಕ್ತ ಕರ್ನಾಟಕ ಕಲ್ಪನೆಯೊಂದಿಗೆ ಸಾಕಾರಗೊಳಿಸಿರುವ ಅನ್ನಭಾಗ್ಯ ಯೋಜನೆಯಡಿ, ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ , ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ ಆಹಾರಧಾನ್ಯ ವಿತರಿಸಲು ನಿರ್ಧರಿಸಿದ್ದು, ಪ್ರಸ್ತುತ ಹೆಚ್ಚುವರಿ ಆಹಾರ ಧಾನ್ಯದ ಬದಲು ನಗದು ವಿತರಿಸಲಾಗುತ್ತಿದ್ದು, ಜಿಲ್ಲೆಯ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳ 2.81 ಲಕ್ಷ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಇದುವರೆಗೆ 112.04 ಕೋಟಿ ರೂ ಗಳನ್ನು ಜಮೆ ಮಾಡಲಾಗಿದೆ.

300x250 AD

ಸರ್ಕಾರದ ಬೃಹತ್ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ,ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರು ಸ್ವಾಭಿಮಾನದಿಂದ ಬದುಕಲು ಹಾಗೂ ಬಡತನ ನಿವಾರಣೆಗೆ ನೇರ ನಗದು ನೀಡಲು ಕುಟುಂಬದ ಮನೆಯ ಯಜಮಾನಿಗೆ ಪ್ರತೀ ತಿಂಗಳು ರೂ.2000 ನೀಡುವ ಗೃಹಲಕ್ಷ್ಮಿ ಯೋಜನೆಯಡಿ, ಜಿಲ್ಲೆಯಲ್ಲಿ ಒಟ್ಟು 3,46,832 ಅರ್ಹ ಮಹಿಳೆಯರನ್ನು ಗುರುತಿಸಲಾಗಿದ್ದು, ಅವರಲ್ಲಿ ಈವರೆಗೆ 3,14,179 ಮಹಿಳೆಯರನ್ನು ನೊಂದಾಯಿಸಿ ಶೇ. 90.59% ಸಾಧನೆಯನ್ನು ಮಾಡಲಾಗಿದ್ದು, 349.43 ಕೋಟಿಗೂ ಅಧಿಕ ಮೊತ್ತವನ್ನು ಖಾತೆಗೆಳಿಗೆ ಜಮೆ ಮಾಡಲಾಗಿದೆ. ನೊಂದಣಿಗೆ ಬಾಕಿ ಇರುವ ಹಾಗೂ ತಾಂತ್ರಿಕ ಕಾರಣಗಳಿಂದ ಸಮಸ್ಯೆಗೊಳಗಾಗಿರುವ ಮಹಿಳೆಯರನ್ನು ಗುರುತಿಸಿ ಅವರ ಅರ್ಜಿಗಳನ್ನೂ ಸಹ ಯೋಜನೆಯ ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ.

ಪದವಿ ಹಾಗೂ ಡಿಪ್ಲೋಮೋ ಉತ್ತೀರ್ಣರಾದ ಪದವೀಧರ ಯುವಜನತೆ ವಿದ್ಯಾಭ್ಯಾಸ ಮುಗಿದ ಕೂಡಲೇ ಉದ್ಯೋಗ ದೊರೆಯದಿದ್ದರೆ, ಅವರು ನಿರಾಶರಾಗದಂತೆ, ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ , ಆರ್ಥಿಕ ಬೆಂಬಲ ನೀಡುವ ಯುವ ನಿಧಿ ಯೋಜನೆಯಡಿ ಪದವೀಧರರಿಗೆ ಪ್ರತಿ ತಿಂಗಳು ರೂ.3,000 ಮತ್ತು ಡಿಪ್ಲೊಮೋ ಪಾಸಾದವರಿಗೆ ರೂ.1,500 ಗಳ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 3440 ಮಂದಿ ನೊಂದಣಿ ಮಾಡಿಕೊಂಡಿದ್ದು, ಅರ್ಹ ಪದವೀಧರರ ನೊಂದಣಿ ಕಾರ್ಯ ಪ್ರಗತಿಯಲ್ಲಿದೆ.
ಸರ್ಕಾರವು ಈ ಗ್ಯಾರಂಟಿ ಯೊಜನೆಗಳನ್ನು ಜಾರಿಗೊಳಿಸಿರುವುದು ಮಾತ್ರವಲ್ಲದೇ ಈ ಗ್ಯಾರಂಟಿಗಳು ನಾಡಿನ ಎಲ್ಲಾ ಜನತೆಗೆ ಸೂಕ್ತವಾಗಿ ತಲುಪಿದೆಯೇ ಎಂಬ ಬಗ್ಗೆ ಪರಿಶೀಲಿಸಲು, ಸಮೀಕ್ಷೆ ಕಾರ್ಯವನ್ನು ಆಯೋಜಿಸಿದೆ. ಜಿಲ್ಲೆಯಲ್ಲಿ ಇದುವರೆಗೆ ಐದೂ ಗ್ಯಾರಂಟಿ ಯೋಜನೆಗಳ ಒಟ್ಟು 13,32,965 ಸಮೀಕ್ಷೆ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ ಯಾವುದೇ ಕುಟುಂಬ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ವಂಚಿತವಾಗಿದಲ್ಲಿ ತಕ್ಷಣವೇ ಅವರಿಗೆ ಸೌಲಭ್ಯಗಳನ್ನು ಮಂಜೂರು ಮಾಡಲು ಕ್ರಮ ವಹಿಸಲಾಗಿದೆ.

ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ರಾಜ್ಯದ ಸರ್ವಾಂಗೀಣ ಅಭಿವೃಧ್ದಿಗೆ ಸರ್ಕಾರವು ಹಲವು ಯೋಜನೆಗಳು ಹಮ್ಮಿಕೊಂಡಿದ್ದು, ಈ ಹಿಂದೆ ಸರ್ಕಾರ ಜಾರಿಗೆ ತಂದು ಯಶಸ್ವಿಯಾಗಿದ್ದ ಕೃಷಿಭಾಗ್ಯ, ಅನುಗ್ರಹ, ವಿದ್ಯಾಸಿರಿ, ಸೇರಿದಂತೆ ಹಲವು ಯೋಜನೆಗಳನ್ನು ಮರು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.
ಎಲ್ಲಾ ಗ್ಯಾರಂಟಿ ಯೋಜನೆಗಳು ತಳಸಮುದಾಯದ ಲಕ್ಷಾಂತರ ಕುಟುಂಬಗಳ ಬಾಳಿಗೆ ಸಂಜೀವಿನಿಯಾಗಿ, ಅವರನ್ನು ಬಡತನದಿಂದ ಆರ್ಥಿಕವಾಗಿ ಮೇಲೆತ್ತುವಂತೆ ಮಾಡಿದ್ದು, ಇದರಿಂದಾಗಿ ಪ್ರತೀ ಕುಟುಂಬಕ್ಕೆ ವಾರ್ಷಿಕ 60000 ರೂ ನಷ್ಟು ನೆರವು ದೊರೆಯುತ್ತಿದೆ. ಅಲ್ಲದೇ ಈ ಯೋಜನೆಗಳು ಸಾರ್ವತ್ರಿಕವಾಗಿ ಸಾಮಾಜಿಕ ನ್ಯಾಯವನ್ನು ಒದಗಿಸಿವೆ. ಅಭಿವೃಧ್ದಿ ಎಂದರೆ ಕೇವಲ ಕಟ್ಟಡ, ಸೇತುವೆ, ರಸ್ತೆಗಳಲ್ಲ. ನಿಜವಾದ ಅಭಿವೃದ್ದಿ ಎಂದರೆ ಜನರ ಶ್ರೇಯೋಭಿವೃಧ್ದಿ ಎಂಬುದು ಈ ಗ್ಯಾರಂಟಿ ಯೋಜನೆಗಳ ಮೂಲಕ ನಿಚ್ಚಳವಾಗಿ ಕಾಣುತ್ತಿದೆ.
ಸಂವಿಧಾನದ ಮೂಲ ತತ್ವವಾದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎನ್ನುವ ಸಮಾನತೆಯ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಸರಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ದಿಗೆ ಪಣತೊಟ್ಟಿದ್ದು, ಜನತೆಯ ಆಶೋತ್ತರಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಾ, ನುಡಿದಂತೆ ನಡೆಯುವ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗ್ಯಾರಂಟಿ ಸಮಾವೇಶದ ಮೂಲಕ ಮತ್ತೊಮ್ಮೆ ಎಲ್ಲಾ ಐದೂ ಗ್ಯಾರಂಟಿಗಳು ಅರ್ಹ ಎಲ್ಲರಿಗೂ ಸಮರ್ಪಕವಾಗಿ ತಲುಪಿರುವ ಬಗ್ಗೆ ಫಲಾನುಭವಿಗಳಿಂದಲೇ ತಿಳಿಯುವ ಉದ್ದೇಶ ಹೊಂದಲಾಗಿದೆ.

Share This
300x250 AD
300x250 AD
300x250 AD
Back to top