ಶಿರಸಿ: ತಾಲೂಕಿನ ಬೆಳ್ಳೇಕೆರಿ ಬಳಿ ಪಾದಚಾರಿ ಮಹಿಳೆಯೋರ್ವಳಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಮೋಹಿನಿ ನಾರಾಯಣ ನಾಯ್ಕ ಎಂಬುವವಳೆ ಮೃತಪಟ್ಟ ಮಹಿಳೆಯಾಗಿದ್ದು ಈಕೆ ಮಾಜಿ ಗ್ರಾ.ಪಂ. ಸದಸ್ಯೆಯಾಗಿದ್ದಳೆಂದು ತಿಳಿದುಬಂದಿದೆ.
ಗುರುವಾರ ಮಧ್ಯಾಹ್ನ ವೇಳೆ ಧರ್ಮಸ್ಥಳ ಸಂಘಕ್ಕೆ ಹಣ ತುಂಬಲು ಗಿಡಮಾವಿನಕಟ್ಟೆಯಿಂದ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.