Slide
Slide
Slide
previous arrow
next arrow

ಮಾ.14ಕ್ಕೆ ನೆಲೆಮಾವಿನಲ್ಲಿ ಗಾಯತ್ರಿ ಜಪಯಜ್ಞ

300x250 AD

ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಶ್ರೀ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮಾ.14ರಂದು ಬೆಳಿಗ್ಗೆ 8.30ಕ್ಕೆ ಶ್ರೀಮಠದಲ್ಲಿ ಗಾಯತ್ರಿ ಜಪಯಜ್ಞವು ನೆರವೇರಲಿದೆ.

ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳವರ ಪೀಠಾರೋಹಣವಾಗಿ ಒಂದು ವರ್ಷ ಪೂರ್ಣಗೊಳ್ಳುವ ಈ ಸುಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಶ್ರೀ ಮಠದ ಶಿಷ್ಯರಿಂದ 1008 ಸಂಖ್ಯೆಗೆ ಕಡಿಮೆ ಇಲ್ಲದಂತೆ ಶ್ರೀ ಪರಮೇಶ್ವರ ಪ್ರೀತ್ಯರ್ಥವಾಗಿ ಶ್ರೀ ಗಾಯತ್ರಿ ಜಪವನ್ನು ಮಾಡಬೇಕಾಗಿ ವಿನಂತಿಸಲಾಗಿದೆ.

ಮಧ್ಯಾಹ್ನ 3.30ರಿಂದ ಶ್ರೀ ಮಠದ ಸಾಂಸ್ಕೃತಿಕ ವೇದಿಕೆ ‘ಸಂಸ್ಕೃತಿ ಸಂಪದ’ದ ವತಿಯಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸಂತ ಭದ್ರಗಿರಿ ಅಚ್ಯುತದಾಸರ ಶಿಷ್ಯ ಹರಿದಾಸ ಕಲಾರತ್ನ ನಾರಾಯಣ ದಾಸರು ಹೀಪನಳ್ಳಿ ಇವರಿಂದ ‘ಪ್ರಹ್ಲಾದ ಚರಿತ್ರೆ’ ಹರಿಕೀರ್ತನೆ ಹಾಗೂ ವಿನಾಯಕ ಹೆಗಡೆ ಮುತ್ತ್ಮುರುಡು ಇವರ ಗಾಯನ ಹಾಗೂ ಕೊಳಲು ವಾದಕ ಸಮರ್ಥ ಹೆಗಡೆ ತಂಗಾರಮನೆ ಇವರಿಂದ ಗಾಯನ – ವಾದನ ಜುಗಲಬಂದಿ ನಡೆಯಲಿದೆ. ತಬಲಾದಲ್ಲಿ ಪಂ. ಶಂತನು ಶುಕ್ಲ ಮುಂಬೈ ಮತ್ತು ರಾಮದಾಸ ಭಟ್ ಶಿರಸಿ, ಸಂವಾದಿನಿಯಲ್ಲಿ ಅಜಯ್ ಹೆಗಡೆ ವರ್ಗಾಸರ ತಾಳದಲ್ಲಿ ಅನಂತಮೂರ್ತಿ ಭಟ್ ಮತ್ತಿಘಟ್ಟ ಸಹಕರಿಸಲಿದ್ದಾರೆ.

300x250 AD

ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಾರಂಭಕ್ಕೆ ಸದ್ಭಕ್ತರು ಆಗಮಿಸಿ ಸಹಕರಿಸುವುದರೊಂದಿಗೆ ಶ್ರೀಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.

Share This
300x250 AD
300x250 AD
300x250 AD
Back to top