Slide
Slide
Slide
previous arrow
next arrow

ಮಂಗನ ಖಾಯಿಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಾಳಿ ಬ್ರಿಗೇಡ್‌ನಿಂದ‌ ಮನವಿ ಸಲ್ಲಿಕೆ

300x250 AD

ಜೋಯಿಡಾ: ಜಿಲ್ಲೆಯ ಶಿರಸಿ, ಸಿದ್ದಾಪುರ ಸೇರಿದಂತೆ ವಿವಿಧೆಡೆ ಮಂಗನ ಕಾಯಿಲೆ ತೀವ್ರ ಸ್ವರೂಪದಲ್ಲಿ ಹಬ್ಬುತ್ತಿರುವ ಹಿನ್ನಲೆಯಡಿ ಜೋಯಿಡಾದಲ್ಲಿ ತ್ವರಿತಗತಿಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಳಿ ಬ್ರಿಗೇಡ್ ವತಿಯಿಂದ ಸೋಮವಾರ ಜೋಯಿಡಾ ತಹಶೀಲ್ದಾರ್ ಕಾರ್ಯಾಲಯದಲ್ಲಿ ಉಪ ತಹಶೀಲ್ದಾರ್ ಸಂಜೀವ್ ಭಜಂತ್ರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ ದೇಸಾಯಿ ಮಾತನಾಡಿ, ಇತ್ತೀಚಿನ‌ ಕೆಲ‌ ದಿನಗಳಿಂದ ತಾಲೂಕಿನಲ್ಲಿ ತಾಪಮಾನ ಏರಿಕೆಯಾಗಿದ್ದು, ಜೋಯಿಡಾ, ಹುಡಸಾ, ಅವುರ್ಲಿ, ಗಾಂಗೋಡಾ, ಗುಂದ, ಉಳವಿ, ಅಣಶಿ, ಕುಂಬಾರವಾಡಾ ಮುಂತಾದೆಡೆಗಳಲ್ಲಿ ಜನರು ತೀವ್ರ ಜ್ವರದಿಂದ ಬಳಲುತ್ತಿದ್ದಾರೆ. ಈ ಭಾಗಗಳಲ್ಲಿ ಹಿಂದೆಯೂ ಮಂಗನ ಕಾಯಿಲೆಗೆ ಸಾಕಷ್ಟು ಜನರು ಬಲಿಯಾಗಿದ್ದಾರೆ. ಮತ್ತೆ ಆ ರೀತಿಯ ಅನಾಹುತಗಳು ನಡೆಯುವ ಮುಂಚೆ ಆರೋಗ್ಯ ಇಲಾಖೆ ತುರ್ತು ಚಿಕಿತ್ಸಾ ಘಟಕ ಮತ್ತು ಔಷಧಿಗಳನ್ನು ವಿತರಿಸಲು ಶೀಘ್ರ ವ್ಯವಸ್ಥೆ ಮಾಡಬೇಕೆಂದರು. ಮಂಗನ ಕಾಯಿಲೆಯ ದೃಷ್ಟಿಯಿಂದ ಹಿಂದಿನಿಂದಲೂ ಜೋಯಿಡಾ ಬಹಳ ಸೂಕ್ಷ್ಮ ಪ್ರದೇಶವಾಗಿದ್ದು, ಸಾರಿಗೆ ವ್ಯವಸ್ಥೆ ಇಲ್ಲದ ಗುಡ್ಡಗಾಡುಗಳಿಂದ ಕೂಡಿದ ಇಲ್ಲಿ ಆರಂಭಿಕ ಹಂತದಲ್ಲಿ ರೋಗದ ಮಾಹಿತಿ ಬೆಳಕಿಗೆ ಬರುವುದಿಲ್ಲ. ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡ ನಂತರ ಅದನ್ನು ನಿಯಂತ್ರಿಸುವುದು ಕಷ್ಟ. ಅದಕ್ಕಾಗಿ ಇಲ್ಲಿ ಬಹಳ‌ ಅಗತ್ಯವಾಗಿ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕೆಂದು ಸುನೀಲ್ ದೇಸಾಯಿ ಒತ್ತಾಯಿಸಿದರು.

300x250 AD

ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಮಿತಿ ಅಧ್ಯಕ್ಷ ಉಮೇಶ್ ವೇಳಿಪ, ಮಾಜಿ ಅಧ್ಯಕ್ಷ ಸತೀಶ್ ನಾಯ್ಕ, ನಾರಾಯಣ ಹೆಬ್ಬಾರ, ಪ್ರಭಾಕರ ನಾಯ್ಕ, ದಿನೇಶ ದೇಸಾಯಿ, ಕಾರ್ಯದರ್ಶಿ ಸಮೀರ ಮುಜಾವರ, ಕಿರಣ ನಾಯ್ಕ, ಈಶ್ವರಿ ದೇಸಾಯಿ, ವೀಣಾ ಹೆಬ್ಬಾರ್, ಇಮ್ರಾನ್ ಮುಜಾವರ, ಬಸವಣ್ಣಯ್ಯ ಹಿರೇಮಠ, ಅಶೋಕ್ ನಾಯ್ಕ, ಮೇಜರ್ ಮಿರಾಶಿ, ಚಂದ್ರಶೇಖರ ದೇಸಾಯಿ, ಬಾಳವ್ವ ಸೀತನ್ನವರ, ಮುಂತಾದವರು ಉಪಸ್ಥಿತರಿದ್ದರು. ನಂತರ ತಾಲೂಕು ವೈದ್ಯಾಧಿಕಾರಿಯವರಿಗೂ ಮಂಗನ ಕಾಯಿಲೆ ಬರದಂತೆ ಮುಂಜಾಗ್ರತಾ ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಳಿ ಬ್ರೀಗೆಡ್ ವತಿಯಿಂದ ಮನವಿ ಸಲ್ಲಿಸಲಾಯಿತು.

Share This
300x250 AD
300x250 AD
300x250 AD
Back to top