ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಸಂಸದ ಅನಂತಕುಮಾರ ಹೆಗಡೆ ಶನಿವಾರ ಭೇಟಿ ನೀಡಿ ಸಂಘದ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಎಂಎನ್ಸಿ ಕಟ್ಟಡ ಕಾಮಗಾರಿ ವೀಕ್ಷಿಸಿ ನಂತರ ಸಂಘದ ಸಾಮಾನ್ಯ ಸೇವಾ ಕೇದ್ರದ ಸಿಎಸ್ಪಿ ಸಫಾರ್ ಮತ್ತು ಪ್ರಧಾನಮಂತ್ರಿ ಸೂರ್ಯ ಘರ್ ಸರ್ವೆ ಯೋಜನೆಯ ನೋಂದಣಿಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಸಂಘದ ನರ್ಸರಿ ವಿಭಾಗ ಮತ್ತು ನಿವೇಶನದ ಗೋದಾಮು ಲೈವ್ನ್ನು ವೀಕ್ಷಿಸಿ ಮೆಚ್ಚುಗೆವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಮಹಾಬಲೇಶ್ವರ ಭಟ್ಟ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಸಂಘದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡುವಂತೆ ಮನವಿ ನೀಡಿದರು.
ಹಾರ್ಸಿಕಟ್ಟಾ ಗ್ರಾಪಂ ಅಧ್ಯಕ್ಷೆ ಹನುಮಕ್ಕ ರಂಗಪ್ಪ ಬೋವಿ, ಸಂಘದ ನಿರ್ದೇಶಕರಾದ ಅನಂತ ಹೆಗಡೆ ಹೊಸಗದ್ದೆ, ಅಶೋಕ ಹೆಗಡೆ ಹಿರೇಕೈ, ನಾಗರಾಜ ಹೆಗಡೆ ಹುಲಿಮನೆ, ನಾಗರಾಜ ಹೆಗಡೆ ಹೊಲಗದ್ದೆ, ಸುಮಾ ಎಂ.ಹೆಗಡೆ ಹೊನ್ನೆಹದ್ದ, ಹಾಗೂ ಸಿಬ್ಬಂದಿಗಳು, ಸಾರ್ವಜನಿಕರಿದ್ದರು.