Slide
Slide
Slide
previous arrow
next arrow

ನಿರ್ವಹಣೆಯಿಲ್ಲದ ‘ಸ್ಮಶಾನ’ ಈಗ ಮೋಜು-ಮಸ್ತಿಯ ‘ತಾಣ’

300x250 AD

ಸಚಿನ ಸಿ. ನಾಯ್ಕ
ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ಬರುವ ಬಹುತೇಕ ಸ್ಮಶಾನಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಸ್ಮಶಾನದಲ್ಲಿ ಗಿಡ ಗಂಟಿಗಳು ಬೆಳೆದು ಶವ ಸಂಸ್ಕಾರಕ್ಕೂ ಮೊದಲು ಸ್ವಚ್ಛತೆ ಕೈಗೊಳ್ಳುವದು ಅನಿವಾರ್ಯವಾಗಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ.

ಪಟ್ಟಣ ವ್ಯಾಪ್ತಿಯಲ್ಲಿರುವ ಇರುವ ಸ್ಮಶಾನಗಳಲ್ಲಿ ಯಾವುದೇ ಮೂಲಸೌಲಭ್ಯವಿಲ್ಲದೆ, ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹಲವಾರು ಅಡ್ಡಿ ಆತಂಕಗಳು ಉಂಟಾಗುತ್ತಿದೆ. ಪಟ್ಟಣ ಪಂಚಾಯತ, ಇಲಾಖೆಯವರು ಮಾತ್ರ ಈವರೆಗೂ ಸೂಕ್ತ ಸೌಲಭ್ಯ ಕಲ್ಪಿಸುವ ಕಾರ್ಯಗಳಿಗೆ ಮುಂದಾಗದಿರುವುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.

ಹಿಂದೂ ರುದ್ರಭೂಮಿಲ್ಲಿ ಮೋಜು: ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೃತಪಟ್ಟವರ ಶವ ಸಂಸ್ಕಾರಕ್ಕಿಂತಲೂ ಕುಡುಕರ ಮೋಜು ಮಸ್ತಿಗೆ ನೆಚ್ಚಿನ ತಾಣವಾಗಿದೆ. ಸ್ಮಶಾನ ಎಂದರೆ ಜನರು ಹಗಲಿನಲ್ಲೆ ಹೋಗಲು ಭಯಪಡುವುದಲ್ಲದೆ, ರಾತ್ರಿಯ ವೇಳೆ ಅತ್ತ ತಿರುಗಿ ನೋಡುವುದಿಲ್ಲ. ಆದರೆ ಕೆಲ ಕುಡುಕರಿಗೆ ಮಾತ್ರ ರಾತ್ರಿಯಾದರೆ ಸಾಕು ಹಿಂದೂ ರುದ್ರಭೂಮಿಯೆ ಅಚ್ಚುಮೆಚ್ಚಿನ ಮೋಜಿನ ಸ್ಥಳವಾಗಿದೆ. ಸ್ಮಶಾನದ ಆವರಣದಲ್ಲಿ ರಾತ್ರಿಯಿಡಿ ಮೋಜು ಮಸ್ತಿ ಮಾಡಿದ ನಂತರ ಎಲ್ಲಿ ಬೇಕಾದಲ್ಲಿ ಮದ್ಯದ ಬಾಟಲಿಗಳನ್ನು ಎಸೆಯುತ್ತಾರೆ. ಸ್ಮಶಾನದಲ್ಲಿ ಮದ್ಯ ಬಾಟಲಿಗಳೆ ಕಂಡುಬರುವುದಲ್ಲದೆ ಬಾಟಲಿಗಳನ್ನು ಒಡೆದು ಹಾಕಿರುವುದರಿಂದ ಶವಸಂಸ್ಕಾರಕ್ಕೆ ಆಗಮಿಸಿದ ಕೆಲವರ ಕಾಲುಗಳಿಗೆ ಗಾಜು ಚುಚ್ಚಿ ಗಾಯವಾದ ಘಟನೆಗಳು ನಡೆದಿವೆ.

ಸೌಲಭ್ಯ ಕೊರತೆ: ಪಟ್ಟಣದ ವ್ಯಾಪ್ತಿಯಲ್ಲಿರುವ ಬಹುತೇಕ ಸ್ಮಶಾನದಲ್ಲಿ ಸೌಲಭ್ಯಗಳಿಲ್ಲದೆ ಶವಸಂಸ್ಕಾರಕ್ಕೆ ಬರುವವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನದ ಸುತ್ತಲೂ ಆವರಣ ಗೋಡೆ ಇಲ್ಲ, ಆಸನಗಳ ಕೊರತೆ, ವಿದ್ಯುಚ್ಛಕ್ತಿ ಸೇರಿದಂತೆ ಇನ್ನು ಹಲವು ಸೌಲಭ್ಯಗಳೆ ಇಲ್ಲದಂತಾಗಿದೆ. ಹಿಂದೂ ರುದ್ರಭೂಮಿಯಲ್ಲಿನ ಆಸನಗಳನ್ನು ಕೆಲ ಕಿಡಗೇಡಿಗಳು ಒಡೆದು ಹಾಕಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಇತ್ತ ತಿರುಗಿ ನೋಡೆದೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗದೆ ನಿರ್ಲಕ್ಷವಹಿಸಿರುವುದಾಗಿ ಸಾರ್ವಜನಿಕರಿಂದ ಆರೋಪಗಳು ಕೇಳಿಬರುತ್ತಿವೆ.

300x250 AD

ಪಟ್ಟಣ ವ್ಯಾಪ್ತಿಯಲ್ಲಿರುವ ಸ್ಮಶಾನದಲ್ಲಿ ಮೂಲ ಸೌಲಭ್ಯಗಳು ಕೊರತೆ ಇದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತ್ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ್ರ ಯಾವುದೆ ಸಮಸ್ಯೆ ಇಲ್ಲವೆಂದು ಹೇಳಿ ಶಾಸಕರ ಗಮನಕ್ಕೆ ತರದೆ ಮುಚ್ಚಿಡಲಾಗುತ್ತದೆ. ಆದರೆ ಸ್ಥಳೀಯ ಜನಪ್ರತಿನಿಧಿಗಳಿಗೆ ಪಟ್ಟಣದಲ್ಲಿರುವ ಸಮಸ್ಯೆಗಳ ಕುರಿತು ಮಾಹಿತಿ ಇದ್ದರು ಶಾಸಕರ ಹಾಗೂ ಸಚಿವರ ಗಮನಕ್ಕೆ ತರದೆ ನಿರ್ಲಕ್ಷ ತೋರುತ್ತಿರುವುದು ಸಾರ್ವಜನಿಕರ ಅಸಮಧಾನಕ್ಕೆ ಕಾರಣವಾಗಿದೆ.
ಹೇಳಿಕೆ: ಹಿಂದೂ ರುದ್ರಭೂಮಿಯಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಮದ್ಯದ ಬಾಟಲಿಗಳನ್ನು ಎಲ್ಲಿ ಬೇಕಾದಲ್ಲಿ ಒಡೆದು ಎಸೆಯುತ್ತಾರೆ. ಇದರಿಂದ ಶವಸಂಸ್ಕಾರಕ್ಕೆ ಹೋದವರಿಗೆ ತೊಂದರೆ ಆಗುತ್ತಿದೆ. ಸ್ಮಶಾನದಲ್ಲಿ ಮೂಲ ಸೌಲಭ್ಯಗಳ ಕೊರತೆ ಕಂಡುಬಂದಿದ್ದು, ಸಂಬಂಧಪಟ್ಟ ಇಲಾಖೆ ಸ್ಮಶಾನಗಳ ಜಿರ್ಣೋದ್ದಾರ ಕೈಗೊಳ್ಳಬೇಕು. ಈಗಾಗಲೇ ಯುವ ಬ್ರಿಗೇಡ್ ವತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಸ್ಚಚ್ಛತೆ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಸ್ಮಶಾನದ ಸುತ್ತಲೂ ಗಿಡಗಳನ್ನು ನೆಡಲಾಗುವುದು. ಶ್ರೀಧರ ಉಪ್ಪಾರ ಯುವ ಬ್ರಿಗೇಡ್ ಪ್ರಮುಖರು .ಮುಂಡಗೋಡ

ಪಟ್ಟಣದಲ್ಲಿರುವ ಸ್ಮಶಾನಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು. ಹಿಂದೂ ರುದ್ರಭೂಮಿಯಲ್ಲಿ ಕುಡಕರ ಹಾವಳಿ ಹೆಚ್ಚಾಗಿರುವುದನ್ನು ತಡೆಯಲು ಪೋಲಿಸ ಇಲಾಖೆ ಗಮನಹರಿಸಬೇಕು. ಸ್ಮಶಾನದ ಆವರಣದಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ತೆಗೆದು ಸ್ವಚ್ಛತೆ ಕೈಗೊಳ್ಳಲಾಗುವುದು.- ಚಂದ್ರಶೇಖರ ಬಿ. ಮುಖ್ಯಾಧಿಕಾರಿ ಪ.ಪಂಚಾಯತ ಮುಂಡಗೋಡ

Share This
300x250 AD
300x250 AD
300x250 AD
Back to top