Slide
Slide
Slide
previous arrow
next arrow

ಚಲನಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ ದಾಂಡೇಲಿಯ ಶ್ರೀಹರಿ ಟಾಕೀಸ್

300x250 AD

ದಾಂಡೇಲಿ : ದಾಂಡೇಲಿಯ ಜನತೆಗೆ ಕಳೆದ 38- 45 ವರ್ಷಗಳಿಂದ ಚಲನಚಿತ್ರಗಳ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕ ಮನೋರಂಜನೆಯನ್ನು ನೀಡುತ್ತಾ ಬಂದಿರುವ ನಗರದ ಜೆ.ಎನ್. ರಸ್ತೆಯಲ್ಲಿರುವ ಅಶೋಕ ಚಿತ್ರಮಂದಿರವು ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿ ಅನೇಕ ವರ್ಷಗಳು ಸಂದಿವೆ. ಆನಂತರ ಮೊನ್ನೆ ಮೊನ್ನೆಯವರೆಗೆ ನಗರ ಹಾಗೂ ನಗರದ ಸುತ್ತಮುತ್ತಲ ಜನತೆಗೆ ಸಾಧ್ಯವಾದಷ್ಟು ಮಟ್ಟಿಗೆ ಚಲನಚಿತ್ರ ಪ್ರದರ್ಶನವನ್ನು ನಿಸ್ವಾರ್ಥವಾಗಿ ನೀಡುತ್ತಾ ಬಂದಿರುವ ಹೆಗ್ಗಳಿಕೆ ಶ್ರೀಹರಿ ಚಿತ್ರಮಂದಿರಕ್ಕಿದೆ.

ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತಾದದಾರೂ, ಈ ಚಿತ್ರಮಂದಿರದ ಸಿಬ್ಬಂದಿಗಳನ್ನು ಮಾತ್ರ ಚಿತ್ರಮಂದಿರದ ಮಾಲಕರು ಕೈ ಬಿಡದೆ ಸಲಹಿದ್ದರು. ಹಾಗೆ ನೋಡಿದರೆ, ಇಲ್ಲಿಯ ಚಿತ್ರಮಂದಿರದಿಂದ ಕಳೆದ ಹಲವಾರು ವರ್ಷಗಳಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದರೂ ದಾಂಡೇಲಿಯ ಜನತೆಗೆ ಸಾಂಸ್ಕೃತಿಕವಾದ ಮನೋರಂಜನೆಯನ್ನು ನೀಡಬೇಕು ಮತ್ತು ಸಿಬ್ಬಂದಿಗಳ ಬದುಕು ಅತಂತ್ರವಾಗಿರಬಾರದೆಂದು ಚಲನಚಿತ್ರ ಪ್ರದರ್ಶನವನ್ನು ಮಾಡುತ್ತಲೇ ಬರಲಾಗಿದೆ.

ಆದರೆ ಎಷ್ಟು ದಿನ ಕೈಯಿಂದ ಹಣ ಖರ್ಚು ಮಾಡಿ ಚಿತ್ರಮಂದಿರವನ್ನು ನಡೆಸಲು ಸಾಧ್ಯ. ಅದು ಈಗಂತೂ ಕೈಗೆರಡು ಮೊಬೈಲ್ ಎಂಬಂತಹ ವಾತಾವರಣವಿರುವುದರಿಂದ ದಾಂಡೇಲಿಯಲ್ಲಂತೂ ಚಿತ್ರಮಂದಿರಕ್ಕೆ ಹೋಗಿ ಚಲನಚಿತ್ರವನ್ನು ನೋಡುವುದು ಬೆರಳಣಿಕೆಯಷ್ಟೆ ಮಂದಿ ಎನ್ನುವುದನ್ನು ಹೆಚ್ಚು ವಿವರಿಸುವ ಅಗತ್ಯವಿಲ್ಲ.

300x250 AD

ಹೌದು ಕಾಲ ಬದಲಾಗಿದೆ, ಬದಲಾದ ಕಾಲಕ್ಕೆ ತಕ್ಕಂತೆ ಪರಿವರ್ತನೆ ಸಹಜ ಪ್ರಕ್ರಿಯೆ. ಹಾಗಾಗಿ ಇಲ್ಲಿ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಮುಂದೇನು? ಕಾದು ನೋಡಬೇಕಾಗಿದೆ.ಏನೇ ಇರಲಿ, ಸದ್ರಿ ಜಾಗವನ್ನು ತೆಗೆದುಕೊಳ್ಳುವಾಗ ಮಾಡಲಾದ ಷರತ್ತಿನಂತೆ ಈ ಜಾಗ ಸದ್ಬಳಕೆಯಾಗಲಿ ಎನ್ನುವುದೇ ಆಶಯ.

Share This
300x250 AD
300x250 AD
300x250 AD
Back to top