Slide
Slide
Slide
previous arrow
next arrow

ತಾಲೂಕು ಹಾಲು ಉತ್ಪಾದಕರ ಸಂಘದಿಂದ ಕೆರೆ ಹೆಬ್ಬಾರ್‌ಗೆ ಗೌರವ ಸನ್ಮಾನ

300x250 AD

ಶಿರಸಿ: ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರಗತಿ ಪರಿಶೀಲನಾ ಸಭೆಗೆ ಆಕಸ್ಮಿಕವಾಗಿ ಆಗಮಿಸಿದ ಜೀವಜಲಾ ಕಾರ್ಯಪಡೆಯ ಅಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್‌ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ನಂತರ ಶಿರಸಿ ತಾಲೂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜೀವಜಲಾ ಕಾರ್ಯಪಡೆಯ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ಜೀವಜಲಾ ಕಾರ್ಯಪಡೆಯ ಕಾರ್ಯವೈಖರಿಯ ಕುರಿತು ಸಭೆಗೆ ತಿಳಿಸಿದರು. ನಾನು ಚಿಕ್ಕಂದಿನಿಂದಲೂ ಹೈನುಗಾರಿಕೆಯಲ್ಲಿ ಆಸಕ್ತಿ ಉಳ್ಳವನಾಗಿದ್ದು, ಅಂದಿನಿಂದ ಇಲ್ಲಿಯವರೆಗೂ ಹೈನುಗಾರಿಕೆಯನ್ನು ಅತ್ಯಂತ ಶೃದ್ಧೆಯಿಂದ ನಡೆಸಿಕೊಂಡು ಬಂದಿದ್ದೇನೆ, ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆಯನ್ನು ನಡೆಸಿಕೊಂಡು ಹೋಗುವಂತವರ ಸಂಖ್ಯೆ ಕುಂಠಿತವಾಗುತ್ತಿದ್ದು, ಸರ್ಕಾರದಿಂದ ರೈತರಲ್ಲಿ ಹೈನುಗಾರಕೆಯ ಕುರಿತು ಆಸಕ್ತಿ ಮೂಡಿಸುವಂತಹ ಯೋಜನೆಗಳು ಕಾರ್ಯಗಳು ಜಾರಿಯಾಗಬೇಕಿದೆ ಎಂದರು.

ನಂತರ ಮಾತನಾಡಿದ ಸುರೇಶ್ಚಂದ್ರ ಕೃಷ್ಣ ಹೆಗಡೆ, ಶ್ರೀನಿವಾಸ ಹೆಬ್ಬಾರ ಅವರು ತಮ್ಮ ಜೀವಜಲ ಕಾರ್ಯಪಡೆಯ ಮೂಲಕ ಯಾವುದೇ ಸ್ವಾರ್ಥವಿಲ್ಲದೇ ಜಿಲ್ಲೆಯಲ್ಲಿ ಅನೇಕ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಕೆರೆಗಳಿಗೆ ಮರುಜೀವ ಕೊಡುವಂತಹ ಕೆಲಸ ಮಾಡಿದ್ದಾರೆ. ಅವರ ಈ ನಿಸ್ವಾರ್ಥ ಕೆಲಸ ನಿಜಕ್ಕೂ ಶ್ಲಾಘನೀಯ ಎಂದರು. ಶ್ರೀಯುತರ ಪರೋಪಕಾರ ಮನೋಭಾವದಿಂದ ಅನೇಕ ಸಂಘ ಸಂಸ್ಥೆಗಳು ಹಾಗೂ ಸಹಸ್ರಾರು ಜನ ಸಹಾಯ ಪಡೆದಿರುವುದು ಹೆಬ್ಬಾರ ಅವರ ಅಪರೂಪದ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಇಂತಹ ಸಜ್ಜನರು ಇಂದು ಈ ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯವನ್ನು ನಮ್ಮ ಜೊತೆ ಹಂಚಿಕೊಂಡಿರುವುದು ನಮಗೆ ಅತ್ಯಂತ ಖುಷಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಸುರೇಶ್ಚಂದ್ರ ಕೃಷ್ಣ ಹೆಗಡೆ ಮತ್ತು ಶಿರಸಿ ತಾಲೂಕಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಂದ ಶೀನಿವಾಸ ಹೆಬ್ಬಾರ್‌ ಅವರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಯುತವಾಗಿ ಸನ್ಮಾನ ಮಾಡಲಾಯಿತು.

300x250 AD

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್. ಬಿಜೂರ್‌, ವಿಸ್ತರಣಾಧಿಕಾರಿ ಮೌನೇಶ ಎಂ. ಸೋನಾರ, ಶಿರಸಿ ಉಪಭಾಗದ ಗುರುದರ್ಶನ ಭಟ್‌, ವಿಸ್ತರಣಾ ಸಮಾಲೋಚಕರಾದ ಜಯಂತ ಪಟಗಾರ ಅಭಿಷೇಕ ನಾಯ್ಕ, ಪ್ರಸಾದ ನಾಯ್ಕ, ನಿರಂಜನ ಗೌಡ, ಹಾಗೂ ಶಿರಸಿ ತಾಲೂಕಿನ ಹಾಲು ಸಂಘಗಳ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top