Slide
Slide
Slide
previous arrow
next arrow

‘ವಿವೇಕ ಕೊಠಡಿ’ ಮಕ್ಕಳ‌ ಕಲಿಕೆಗೆ ಪೂರಕವಾಗಿದೆ: ದಿನಕರ ಶೆಟ್ಟಿ

300x250 AD

ಕುಮಟಾ: ತಾಲೂಕಿನ ಹಿರೇಗುತ್ತಿ ಗ್ರಾ. ಪಂ. ವ್ಯಾಪ್ತಿಯ ದೇವರಬೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವೇಕ ಕೊಠಡಿಯನ್ನು  ಶಾಸಕ ದಿನಕರ ಶೆಟ್ಟಿ ಅವರು ಬುಧವಾರ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿ, ಯಾವ ಸರ್ಕಾರವೇ ಆಗಿರಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಪ್ರಥಮ ಆದ್ಯತೆಯಾಗಿ ಸ್ವೀಕರಿಸಿ ಕೆಲಸಮಾಡುತ್ತಾ ಬಂದಿದೆ. ಪಠ್ಯಪುಸ್ತಕ ಹಾಗೂ ಸಮವಸ್ತ್ರವನ್ನು ಉಚಿತವಾಗಿ ಒದಗಿಸುವುದು, ಮಧ್ಯಾಹ್ನದ ಬಿಸಿಯೂಟ ನೀಡುವುದು, ಹಾಲು, ಮೊಟ್ಟೆ ಹೀಗೆ ಪೌಷ್ಟಿಕ ಆಹಾರಗಳ ವಿತರಣೆ ಇವೆಲ್ಲವನ್ನು ಸರ್ಕಾರವು ವಿದ್ಯಾರ್ಥಿಗಳೆಲ್ಲರೂ ಶಿಕ್ಷಣವನ್ನು ಪಡೆಯಬೇಕು ಎನ್ನುವ ಸದುದ್ದೇಶದಿಂದ ನೀಡುತ್ತಿದೆ. ಯಾವ ಮಗುವು ಶಿಕ್ಷಣದಿಂದ ವಂಚಿತ ಆಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರವು ಸಕಲರೀತಿಯಲ್ಲಿ ಕಾಳಜಿವಹಿಸುತ್ತಿದೆ. ಸುಸಜ್ಜಿತ ವರ್ಗಕೋಣೆಯು ಮಕ್ಕಳ ಕಲಿಕೆಗೆ ಪೂರಕ ವಾತಾವರಣವನ್ನು ಕಲ್ಪಿಸುತ್ತದೆ. ಇದಕ್ಕಾಗಿ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವೇಕ ಶಾಲೆ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದರ ಅಡಿಯಲ್ಲಿ ಕುಮಟಾ ತಾಲೂಕಿನಲ್ಲಿ 27 ವಿವೇಕ ಕೊಠಡಿಗಳು ನಿರ್ಮಾಣವಾಗಿವೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಕೋಳಿ ಮಂಜಗುಣಿ ರಸ್ತೆನಿರ್ಮಾಣಕ್ಕೆ ಅನುದಾನವನ್ನು ಒದಗಿಸಿಕೊಟ್ಟಿರುವ ಶಾಸಕರಿಗೆ ಗ್ರಾಮಸ್ಥರು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.

300x250 AD

ಹಿರೇಗುತ್ತಿ ಗ್ರಾಮಪಂಚಾಯತ್ ಸದಸ್ಯರುಗಳಾದ ಮಹೇಶ್ ನಾಯಕ, ಅನಂದು ನಾಯಕ ಹಾಗೂ ಮಂಗಲಾ ಹಳ್ಳೆರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರೇಖಾ ಸಿ. ನಾಯ್ಕ್, ಪಿ.ಆರ್.ಇ.ಡಿ. ಅಭಿಯಂತರ ರಾಘವೇಂದ್ರ ನಾಯ್ಕ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಾರುತಿ ಪಟಗಾರ, ಮುಖ್ಯಶಿಕ್ಷಕಿ ದೇವಾಂಗಿನಿ ನಾಯಕ, ಮೀನುಗಾರರ ಸಂಘದ ಅಧ್ಯಕ್ಷ ಸುರೇಶ ಹರಿಕಂತ್ರ, ಸ್ಥಳೀಯ ಪ್ರಮುಖರಾದ ನೀಲಪ್ಪ ಗೌಡ, ರಾಮು ಕೆಂಚನ, ದೇವಿದಾಸ ನಾಯಕ, ಹಮ್ಮಣ್ಣ ನಾಯಕ, ಗಣಪತಿ ಪಟಗಾರ, ಜಗದೀಶ್ ಹರಿಕಂತ್ರ ಹಾಗೂ ಇತರರು ಇದ್ದರು.

Share This
300x250 AD
300x250 AD
300x250 AD
Back to top