ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಗ್ರಾಮ ದೇವತಿಯಾದ ಶ್ರೀ ದೇವತಿ ದೇವಿಯ 14ನೇ ಜನೋತ್ಸವ (ವರ್ಧಂತಿ ಉತ್ಸವ) ಮಂಗಳವಾರದಂದು ವಿಜೃಂಭಣೆಯಿಂದ ಜರುಗಿತು.
ಅಂದು ಶ್ರೀ ದೇವತಿ ದೇವಿಯ ಸನ್ನಿಧಾನದಲ್ಲಿ ಬೆಳ್ಳಿಗೆಯಿಂದಲೇ ಶ್ರೀ ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿವರ್ಷದಂತೆ ಸಂಪ್ರದಾಯ ಮೂಲಕ ನಡೆಯಿತು. ಮಧ್ಯಾಹ್ನ ದೇವರ ಪೂಜೆ ಆದ ನಂತರ ಆನಂದು ಗೋಪಾಲಕೃಷ್ಣ ನಾಯ್ಕ ದೇವಳಮಕ್ಕಿ ಇವರಿಂದ ಅನ್ನಸಂತರ್ಪಣೆ ನಡೆದವು. ರಾತ್ರಿ ಸಮಯದಲ್ಲಿ ಶ್ರೀ ದೇವಿಯ ಮಹಾಪೂಜೆ ಜರುಗಿದ ನಂತರ ಪದೀಪ ಕೋಠಾರಕರ ಕಿನ್ನರ ಅವರು ಬರೆದ “ಮಂಗಳಸೂತ್ರ ಹೆ ಪವಿತ್ರ ಘಡತಾ ಸಗಳೆ ವಿಚಿತ್ರ” ಎಂಬ ಕೊಂಕಣಿ ನಾಟಕವನ್ನು ಸ್ಥಳೀಯ ಮಹಾದೇವ ನವ ನಾಟ್ಯ ಮಂಡಳಿಯವರು ಪ್ರದರ್ಶಿಸಿದರು.