Slide
Slide
Slide
previous arrow
next arrow

ಮಾ.16ರಿಂದ ಚಂದಾವರ ಹನುಮಂತ ದೇವರ ಮೂಲ ಮೂರ್ತಿ ಪ್ರತಿಷ್ಠಾಪನೆ

300x250 AD

ಹೊನ್ನಾವರ; ಸುಮಾರು 2000 ವರ್ಷಗಳ ಮೂಲ ಲೋಹಮೂರ್ತಿಯ, ಪ್ರತಿಷ್ಠಾಪನಾ ಮಹೋತ್ಸವವು ಮಾರ್ಚ 16, 17 ಮತ್ತು 18ರಂದು ನಡೆಯಲಿದ್ದು, ಸಂತ ರಾಮದಾಸರ ವಾಣಿಯ ಮೂಲಕ ಛತ್ರಪತಿ ಶಿವಾಜಿ ಮರಾಠ ದೊರೆ ಭೇಟಿ ನೀಡಿದ ಪುರಾಣ ಪ್ರಸಿದ್ದ ಸ್ಥಳ, ಚಂದಾವರ ಸೀಮೆಯ ಜನರ ಆರಾಧ್ಯ ದೇವರ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಪೂರ್ವ ತಯಾರಿ ನಡೆಯುತ್ತಿದೆ.

ಶ್ರೀ ದೇವರ ಅಪ್ಪಣೆಯಂತೆ ಪ್ರತಿಷ್ಠಾ ಕಾರ್ಯವು ಶ್ರೀ ಕ್ಷೇತ್ರ ಗೊಕರ್ಣದ ಆಗಮ ವಿದ್ವಾನ್ ತಾಂತ್ರಿಕ ವೇದ ಮೂರ್ತಿ ಶ್ರೀ ಕೃಷ್ಣ ಭಟ್ಟ ಷಡಕ್ಷರಿ ಇವರ ನೇತೃತ್ವದಲ್ಲಿ ನಡೆಯಲಿದೆ.ಮಾ.16 ರಂದು ಬೆಳಿಗ್ಗೆ ಸಾರ್ವಜನಿಕ ಪ್ರಾರ್ಥನೆ, ಗಣೇಶ ಪೂಜಾ ಯತ್ವಿಗ್ವರಣ, ಕೌತುಕಬಂಧನ, ಮೂರ್ತಿಪರಿಗ್ರಹ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಹಾಗೂ ಸಭಾಂಗಣದಲ್ಲಿ ಬೆಳಿಗ್ಗೆ 10:30 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3.00 ರಿಂದ ರಾಮತಾರಕ ಮಂತ್ರ ಪಠಣ, ಆಮಂತ್ರಿತ ಗಣ್ಯರೊಂದಿಗೆ ಧರ್ಮ ಸಭೆ ನಡೆಯಲಿದೆ. ಸಂಜೆ 5.00 ಗಂಟೆಯಿಂದ ಕೋಲಾಟ,ಜನಪದ ನೃತ್ಯ,ಭರತನಾಟ್ಯ,ಹಾಲಕ್ಕಿ ಜಾನಪದ ಕಾರ್ಯಕ್ರಮಗಳು ನಡೆಯಲಿದ್ದು 6.00 ರಿಂದ 8.00 ಗಂಟೆಯವರೆಗೆ ಪದ್ಮಶ್ರೀ ವಿಜೇತ ಶ್ರೀ ವೆಂಕಟೇಶಕುಮಾರ ಧಾರವಾಡ ಇವರ ಸಂಗೀತ ಹಾಗೂ ಭಜನ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10:15 ಕ್ಕೆ ಹೊಸಾಡು ಕಲಾ ತಪಸ್ವಿ ತಂಡ ಇವರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಮಾ.17, ರವಿವಾರ ಪ್ರತಿಷ್ಠಾ ಹೋಮಗಳು ಬೆಳಿಗ್ಗೆ 10:15 ಕ್ಕೆ ವೃಷಭ ಲಗ್ನದ ಶುಭ ಮೂಹೂರ್ತದಲ್ಲಿ ಮೂಲ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 10:30 ಗಂಟೆಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 3.00 ರಿಂದ ರಾಮತಾರಕ ಮಂತ್ರ ಪಠಣ, ಆಮಂತ್ರಿತ ಗಣ್ಯರೊಂದಿಗೆ ಧರ್ಮ ಸಭೆ ನಡೆಯಲಿದೆ.ಸಂಜೆ 5.00 ಗಂಟೆಯಿಂದ ಹರಿದಾಸ ಡಿ.ಆರ್.ಹೆಗಡೆ ಇವರಿಂದ ಹರಿಕಥಾ ಶ್ರವಣ ಕಾರ್ಯಕ್ರಮ. ಕೋಲಾಟ,ಜನಪದ ನೃತ್ಯ, ಭರತನಾಟ್ಯ,ಹಾಲಕ್ಕಿ ಜಾನಪದ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 8 ರಿಂದ 10 ರ ವರೆಗೆ ಶ್ರೀ ಪುತ್ತೂರು ನರಸಿಂಹ ನಾಯಕರವರ ಭಜನ್ ಲಹರಿ ನಡೆಯಲಿದೆ. ರಾತ್ರಿ 10:15 ಕ್ಕೆ ವಿನಾಯಕ ನಾಯ್ಕ ದೈಹಿಕ ಶಿಕ್ಷಕರು, ಇವರ ಪ್ರಾಯೋಜಕತ್ವದಲ್ಲಿ “ದೇವಿ ಮಹಾತ್ಮೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ.

300x250 AD

ಮಾ.18 ರಂದು ಕುಂಬಾಭಿಷೇಕ, ಪೂರ್ಣಾಹುತಿ, ಮಹಾ ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 3.00 ರಿಂದ ರಾಮತಾರಕ ಮಂತ್ರ ಪಠಣ, ಆಮಂತ್ರಿತ ಗಣ್ಯರೊಂದಿಗೆ ಧರ್ಮ ಸಭೆ ನಡೆಯಲಿದೆ.ಸಂಜೆ 7.30 ಗಂಟೆಯಿಂದ ಕೋಲಾಟ,ಜನಪದ ನೃತ್ಯ, ಭರತನಾಟ್ಯ,ಹಾಲಕ್ಕಿ ಜಾನಪದ ಕಾರ್ಯಕ್ರಮಗಳು, ಶಾಲಾ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ರಾತ್ರಿ 12.00 ಗಂಟೆಯಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾ. 18ರಂದು ಸುಮಾರು ಒಂದು ಲಕ್ಷ ಜನರು ದೇವರ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಭಾಗವಹಿಸುವ ನೀರಿಕ್ಷೆ ಇದ್ದು, ಈ ಕುರಿತು ಆಡಳಿತ ಮಂಡಳಿ ಹಾಗೂ ಪ್ರತಿಷ್ಠಾ ಕಲಾವೃದ್ಧಿ ಸಮಿತಿ ಸಾಕಷ್ಟು ಪೂರ್ವತಯಾರಿ ಮಾಡುತ್ತಿದೆ. ಪ್ರತಿಷ್ಠಾ ಮಹೋತ್ಸವದ ಸಲುವಾಗಿ ಧಾರ್ಮಿಕ, ಊಟ/ಉಪಹಾರ, ಪ್ರಚಾರ, ಆರ್ಥಿಕ, ಧರ್ಮಸಭೆ, ಸಾಂಸ್ಕೃತಿಕ, ಪೆಂಡಾಲ, ತಳಿರು-ತೋರಣ, ನೀರು ಸರಭರಾಜು, ಯಾಗಶಾಲಾ, ದರ್ಶನ, ಪಾರ್ಕಿಂಗ್ ಹಾಗೂ ಪ್ರಸಾದ ವಿತರಣೆ ಮುಂತಾದ ಸಮಿತಿಗಳನ್ನು ನಿರ್ಮಿಸಿ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದೇವೆ. ಎಲ್ಲಾ ಸಮಿತಿಯವರು ಅಹರ್ನಿಶಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಶ್ರೀ ದೇವರ ಸನ್ನಿಧಿಯಲ್ಲಿ ನಡೆಯುವ ಶನಿ ಕಥೆ, ಪವನ ಕುಂಭಾಭಿಶೇಕ ಹಾಗೂ ಸರ್ವಸೇವಾ ಪಾವತಿಯನ್ನು ಭಕ್ತಾದಿಗಳು ಪಡೆದುಕೊಳ್ಳುತ್ತಿದ್ದಾರೆ. ಹಾಗೂ ಪ್ರತಿಷ್ಠಾ ಮಹೊತ್ಸವಕ್ಕೆ ದೇಣಿಗೆಯನ್ನು ನೀಡುತ್ತಿದ್ದಾರೆ.
ಭಕ್ತಾದಿಗಳ ದರ್ಶನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. 10 ಎಕರೆ ಪ್ರದೇಶದ ಪಾರ್ಕಿಂಗ್ ವ್ಯವಸ್ಥೆ, 5 ಎಕರೆ ಜಾಗದಲ್ಲಿ ಊಟದ ವ್ಯವಸ್ಥೆ, ಸುಮಾರು 10 ಸಾವಿರ ಜನರು ಕುಳಿತುಕೊಳ್ಳುವ ಸಭಾಂಗಣ, ಸಂಗೀತ, ಭಜನೆ, ಸುಗ್ಗಿ ಕುಣಿತ, ಯಕ್ಷಗಾನ, ಕೀರ್ತನೆ, ಭರತ ನಾಟ್ಯ ಮುಂತಾದ ಕಾರ್ಯಕ್ರಮ ವೀಕ್ಷಿಸಲು ಅತ್ಯುತ್ತಮ ವ್ಯವಸ್ಥೆ ಮಾಡಲಾಗಿದೆ.
ಚಂದಾವರ ಸೀಮೆಯ 108 ಬೈಠಕ್‌ಗಳಲ್ಲಿ ಸಂಚರಿಸುವ ನಮ್ಮ ಸಂಚಾರಿ “ಹನುಮ” ತನ್ನ ಮೂಲ ಕ್ಷೇತ್ರದ ಮೂಲ ಮೂರ್ತಿಯ ಪ್ರತಿಷ್ಠಾ ಮಹೊತ್ಸವ ವಿಜೃಂಭಣೆಯಿಂದ ಆಗುವಂತೆ ಎಲ್ಲಾ ಭಕ್ತರನ್ನು ಕರೆಯಿಸಿಕೊಂಡು ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ.

ದಿನಾಂಕ 16 ಮತ್ತು 17 ರಂದು ಆಗಮಿಸುವ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮಾ.18 ರಂದು ಮಹಾ ಅನ್ನ ಸಂತರ್ಪಣೆ ನಡೆಯಲಿದೆ. ಹಿರಿಯ ನಾಗರಿಕರಿಗೆ ದುರ್ಬಲರಿಗೆ ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ದಿನಾಂಕ 02/03/2024 ರಂದು ಚಂದಾವರ ಸೀಮೆಯ ಎಲ್ಲಾ ಬೈಠಕನ ಸಾರ್ವಜನಿಕರ ಸಭೆ ನಡೆಸಿ ಪ್ರತಿಷ್ಠಾಮಹೋತ್ಸವದ ಸಂಪೂರ್ಣ ವಿವರ ನೀಡಲಾಗಿದೆ ಎಂದು ಎ.ಆರ್. ನಾಯ್ಕ, ಎನ್.ಎಸ್.ನಾಯ್ಕ, ದೇವು ಗೌಡ, ಎಮ್. ಕೆ. ಪಟಗಾರ, ಉಮೇಶ ನಾಯ್ಕ (ಮೊಕ್ತೇಸರ ಮಂಡಳಿ) ಹಾಗೂ ಆರ್.ಜಿ.ನಾಯ್ಕ, ಆನಂದ ನಾಯ್ಕ (ಪ್ರತಿಷ್ಠಾ ಕಲಾವೃದ್ಧಿ ಸಮಿತಿ) ಇವರು ತಿಳಿಸಿರುತ್ತಾರೆ.

Share This
300x250 AD
300x250 AD
300x250 AD
Back to top