Slide
Slide
Slide
previous arrow
next arrow

ಗಡಿ ಗುರುತು ಮತ್ತು ಸರ್ವೆಗೆ ಸಹಕರಿಸಿ

300x250 AD

ಕಾರವಾರ: ಇತ್ತೀಚಿನ ವರ್ಷಗಳಲ್ಲಿ ಬೇಸಿಗೆಯ ಸಮಯದಲ್ಲಿ ಗಂಗಾವಳಿ ನದಿಯು ಬತ್ತಿ ಹೋಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಭಾರತ ದೇಶದ ರಕ್ಷಣಾ ಪಡೆಗೆ (ನೌಕಾನೆಲೆ) ಶುದ್ಧ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕಾರವಾರ ನಗರ, ಅಂಕೋಲ ಪಟ್ಟಣ ಹಾಗೂ ಮಾರ್ಗ ಮಧ್ಯದ ಗ್ರಾಮ ಪಂಚಾಯತ್ನ ಹಲವು ಪ್ರದೇಶಗಳು ಅರಬ್ಬೀ ಸಮುದ್ರದ ತಟದಲ್ಲಿರುವುದರಿಂದ ಬೇಸಿಗೆ ಸಮಯದಲ್ಲಿ ಈ ಬಾವಿಗಳಲ್ಲಿಯ ನೀರು ಸಹ ಲವಣಯುಕ್ತವಾಗಿ ಕುಡಿಯಲು ಯೋಗ್ಯವಿರುವುದಿಲ್ಲ. ಈ ಸಮಸ್ಯೆಗಳನ್ನು ಶಾಶ್ವತವಾಗಿ ನಿವಾರಿಸಲು, ಕೇವಲ ಬೇಸಿಗೆಯಲ್ಲಿ ನೀರು ಸಂಗ್ರಹಿಸಲು ಹೊನ್ನಳ್ಳಿ ಬಳಿ ಗಂಗಾವಳಿ ನದಿಗೆ ಅಡ್ಡಲಾಗಿ ವೆಂಟೆಡ್ ಬ್ಯಾರೇಜ್ ನಿರ್ಮಾಣ ಮಾಡುವ ಕಾಮಗಾರಿಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು ಕರ್ನಾಟಕ ಸರ್ಕಾರದ ಮಹತ್ವ ಪೂರ್ಣ ಯೋಜನೆಯಾಗಿದೆ. ಸದರಿ ಯೋಜನೆಗೆ ಕರ್ನಾಟಕ ಘನ ಸರ್ಕಾರದ ಆಡಳಿತಾತ್ಮಕ ಅನುಮೋದನೆ ದೊರಕಿರುತ್ತದೆ ಮತ್ತು ದಿ: 15-02-2020 ರಂದು ಕಾರ್ಯಾದೇಶ ದೊರಕಿದ್ದು, ಟೆಂಡರ್ ಕಾಲಾವಧಿ 36 ತಿಂಗಳುಗಳು ನೀಡಲಾಗಿದೆ.
ಸದರಿ ಯೋಜನೆಯಿಂದ ಫಲಾನುಭವಿಗಳಾದ ಕಾರವಾರ-ಅಂಕೋಲ ಪಟ್ಟಣಗಳು,ಮಾರ್ಗ ಮಧ್ಯದ 13 ಗ್ರಾಮ ಪಂಚಾಯತ್ಗಳು (ಬೇಲೆಕೇರಿ, ಅವರ್ಸಾ, ಅಲಗೇರಿ, ಅಗಸೂರು, ವಂದಿಗೆ, ಅಮದಳ್ಳಿ, ಬೊಬ್ರುವಾಡ, ಚೆಂಡಿಯಾ, ಅರ್ಗಾ, ಹಾರವಾಡ, ಬೆಳಂಬಾರ, ತೋಡೂರು ಮತ್ತು ಹಟ್ಟಿಕೇರಿ), ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಸೀಬರ್ಡ ನೌಕಾನೆಲೆ ಕಾರವಾರ ಇವರುಗಳಿಗೆ ಸುಮಾರು 6.0 ಲಕ್ಷ ಜನಸಂಖ್ಯೆ ಅನುಗುಣವಾಗಿ 2068 ನೇ ವರ್ಷದವರೆಗೆ 78.77 ಎಂಎಲ್ಡಿ ನೀರಿನ ಬೇಡಿಕೆಯನ್ನು ಪೂರೈಸಲು ಪ್ರಯೋಜನಕಾರಿಯಾಗುತ್ತದೆ. ಇದಲ್ಲದೇ, ಗೋಕರ್ಣ ಗ್ರಾಮದ ಹಳ್ಳಿಗಳಿಗೆ ಹಾಗೂ ಇತರೆ ಮಾರ್ಗ ಮಧ್ಯದ ಹಳ್ಳಿಗಳಿಗೂ ಸಹ ಕುಡಿಯುವ ನೀರನ್ನು ಒದಗಿಸಬಲ್ಲ ನೀರಿನ ಮೂಲವಾಗಿರುತ್ತದೆ.

ನದಿಪಾತ್ರದಲ್ಲಿ ಮಾತ್ರ ನೀರನ್ನು ಸಂಗ್ರಹಣೆ ಮಾಡಲು ಮತ್ತು ಖಾಸಗಿ ಜಮೀನಿನನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮಾನ್ಯ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ದಿ: 14-12-2020 ರಂದು ನಡೆದ ಎಸ್ಎಲ್ಸಿಸಿ ಸಭೆಯಲ್ಲಿ, ಮೂಲ ಪ್ರಸ್ಥಾವನೆ 10.50 ಮೀಟರ್ ಎತ್ತರಕ್ಕೆ ಜಲಾನಯನವಾಗುವಂತಹ ಖಾಸಗಿ ಭೂಮಿ 44ಎಕರೆ-05ಗುಂಟೆ-06ಆಣೆ ಬದಲಿಗೆ 8.50 ಮೀಟರ್ ಎತ್ತರಕ್ಕೆ ಜಲಾನಯನವಾಗುವಂತಹ ಖಾಸಗಿ ಭೂಮಿ 08ಎಕರೆ-15ಗುಂಟೆ-00ಆಣೆಯನ್ನು ಸ್ವಾಧೀನ ಪಡಿಸುವಂತೆ ನಿರ್ದೇಶಿಸಿರುತ್ತಾರೆ. ಅದರಂತೆ, ಪ್ರಸ್ತಾವನೆಯನ್ನು ಸಹಾಯಕ ಕಮೀಷನರ್, ಕುಮಟಾ ಇವರಿಗೆ ಸಲ್ಲಿಸಲಾಗಿರುತ್ತದೆ. ಸದರಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹಿಲ್ಲೂರು ಗ್ರಾಮದಲ್ಲಿ ಖಾಸಗಿ ಸರ್ವೆ ನಂ. 330, 333/1, 333/11, 333/4, 379 ಮತ್ತು ಅಗಸೂರು ಗ್ರಾಮದಲ್ಲಿ ಖಾಸಗಿ ಸರ್ವೆ ನಂ. 64/10, 64/11, 64/12, 64/13, 64/14, 64/15, 64/16, 64/17, 64/18, 64/7, 64/8, 68/1, 68/2 ಮತ್ತು ಹೆಗ್ಗರಮಕ್ಕಿಗದ್ದೆ ಗ್ರಾಮದಲ್ಲಿ ಖಾಸಗಿ ಸರ್ವೆ ನಂ. 51ಪಿ ಗಳನ್ನು ಒಳಗೊಂಡಿರುತ್ತದೆ.
ಕರ್ನಾಟಕ ಸರ್ಕಾರದ ಮಹತ್ವ ಪೂರ್ಣ ಯೋಜನೆಯಾಗಿದ್ದು, ಸದರಿ ಭೂಸ್ವಾಧೀನ ಪ್ರಕ್ರಿಯೆಯಡಿಯಲ್ಲಿ ಅಗಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 08ಎಕರೆ-12ಗುಂಟೆ-00ಆಣೆ, ಹಿಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 00ಎಕರೆ-03ಗುಂಟೆ-00ಆಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಗಡಿ ಗುರುತು ಮತ್ತು ಸರ್ವೆ ಕೈಗೊಳ್ಳಲು ದಿ: 11-3-2024 ರಂದು ನಿಗದಿಪಡಿಸಿದ್ದು, ಸಂಬAಧಿಸಿದ ಖಾಸಗಿ ಜಮೀನಿನ ಮಾಲಿಕರು ಸಹಕರಿಸಬೇಕಾಗಿ ಸಹಾಯಕ ಕಮೀಷನರ್, ಕುಮಟಾರವರು ಕೋರಿರುತ್ತಾರೆ. ಸದರಿ ಪ್ರಕಟಣೆಯ ಕುರಿತು ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಭೂಮಾಲೀಕರು/ಹಕ್ಕುದಾರರು /ಹಿತಾಸಕ್ತರು ವಿಶೇಷ ಭೂಸ್ವಾಧೀನಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರು ಕುಮಟಾ ಇವರಲ್ಲಿಗೆ ಲಿಖಿತ ಮನವಿಯನ್ನು ಸಲ್ಲಿಸಬೇಕಾಗಿ ಪ್ರಕಟಣೆ ತಿಳಿಸಿದೆ.

300x250 AD

Share This
300x250 AD
300x250 AD
300x250 AD
Back to top