Slide
Slide
Slide
previous arrow
next arrow

ಮಾ.2ರಿಂದ ‘ಹಳವಳ್ಳಿ ಆಲೆಮನೆ ಹಬ್ಬ’

300x250 AD

ಅಂಕೋಲಾ: ಶ್ರೀ ಸಿದ್ಧಿವಿನಾಯಕ ಹವ್ಯಕ ಟ್ರಸ್ಟ್, ಕಿರಣ ಯುವಕ ಮಂಡಲ,ಆಶಾ ಯುವತಿ ಮಂಡಲ ,ಸಮಸ್ತ ಊರನಾಗರಿಕರ ಆಶ್ರಯದಲ್ಲಿ ತಾಲೂಕಿನ ಗಡಿ ಪ್ರದೇಶವಾದ ಹಳವಳ್ಳಿಯಲ್ಲಿ ಇದೇ ಮಾರ್ಚ್ 2 ರಂದು ‘ಹಳವಳ್ಳಿ ಆಲೆಮನೆ ಹಬ್ಬ’ ನಡೆಯಲಿದೆ.

ನಶಿಸುತ್ತಿರುವ ಆಲೆಮನೆಗಳ ಪರಿಚಯ ಮುಂದಿನ ತಲೆಮಾರಿನವರಿಗೆ ಪರಿಚಯಿಸುವ ಉದ್ದೇಶ ಹಾಗೂ ಎಲ್ಲರೂ ಒಂದೆಡೆ ಸೇರಿ ಸಮಯವನ್ನು ಸದ್ವಿನಿಯೋಗ ಮಾಡುವ ಸದುದ್ದೇಶದಿಂದ ಸಮಾನ ಮನಸ್ಕ ಯುವಕರೆಲ್ಲಾ ಸೇರಿ ಆಲೆಮನೆ ಹಬ್ಬವನ್ನು ಆಯೋಜಿಸಿದ್ದಾರೆ.
ಕುಡಿಯಲು ಹಾಲು ಹಾಗೂ ತಿನ್ನಲು ಮಿರ್ಚಿ ಹಾಗೂ ಮಂಡಕ್ಕಿ ಉಚಿತವಾಗಿದ್ದು, ಮನೆಗೊಯ್ಯಲು ಕಬ್ಬಿನ ಹಾಲು ಕೈಗಟಕುವ ದರದಲ್ಲಿ ಸಿಗುವುದು. ಇದೇ ಸಂದರ್ಭದಲ್ಲಿ ಊರಿನವರಿಂದ ಧಮಾಮಿ ನೃತ್ಯ ಕೂಡಾ ನಡೆಯಲಿದ್ದು, ಆಕರ್ಷಣೆಯ ಕೇಂದ್ರಬಿಂದುವಾಗಲಿದೆ.

300x250 AD

ಆಲೆಮನೆ‌ಹಬ್ಬ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ನಡೆಯಲಿದೆ ಎಂದು ಸಂಘಟನೆಯ ಪ್ರಮುಖರಾದ ನಾರಾಯಣ ಹೆಬ್ಬಾರ್ ಹಾಗೂ ವಿಶ್ವನಾಥ ಹೆಬ್ಬಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top