Slide
Slide
Slide
previous arrow
next arrow

ಚಿಕಿತ್ಸೆ ಫಲಕಾರಿಯಾಗದೆ ತಾಯಿ, ನವಜಾತ ಶಿಶು ಸಾವು

300x250 AD

ಜೋಯಿಡಾ: ತಾಲೂಕಿನ ಜೋಯಿಡಾದ ಜಗಲಬೇಟನ ಪ್ಲಾಟ್‌ನಲ್ಲಿ ವಾಸವಿದ್ದ ಮಹಿಳೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವನ್ನಪ್ಪಿದ್ದರೆ, ಖಾನಾಪುರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಕೆಯ ಮಗು ಸಾವನ್ನಪ್ಪಿದೆ.

ಜಗಲಬೇಟನ ಪ್ಲಾಟ್‌ನಲ್ಲಿ ವಾಸವಾಗಿರುವ ನಾಗರಾಜ ನಾಯ್ಕ ಅವರ ಪತ್ನಿ ನಮೃತಾ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದಳು. ಬುಧವಾರ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ಆಶಾ ಕಾರ್ಯಕರ್ತೆ ಮತ್ತು ಕುಟುಂಬಸ್ಥರು ಆಕೆಯನ್ನು ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರು. ರಾತ್ರಿ 9 ಗಂಟೆಯವರೆಗೂ ಚಿಕಿತ್ಸೆಗಾಗಿ ಆಕೆಯನ್ನು ಅಲ್ಲಿಯೇ ಇರಿಸಿಕೊಂಡಿದ್ದಾರೆ. ಸತತ 10 ಗಂಟೆಗಳ ಕಾಲ ಇರಿಸಿಕೊಂಡು ಸಹಜ ಹೆರಿಗೆಗೆ ಅವಕಾಶ ಕಡಿಮೆ ಇರುವುದರಿಂದ ರಾತ್ರಿ 9 ಗಂಟೆ ಸುಮಾರಿಗೆ ರಾಮನಗರ ಸರಕಾರಿ ಆರೋಗ್ಯ ಕೇಂದ್ರದಿಂದ ಖಾನಾಪುರದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ.

ಬಳಿಕ 11.15ಕ್ಕೆ ಖಾನಾಪುರದ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ, ಸಹಜವಾಗಿ ಹೆರಿಗೆ ಮಾಡಿಸಲಾಗಿತ್ತಾದರೂ ಮಗು ಸಾವನ್ನಪ್ಪಿದೆ. ಮತ್ತು ಹೆರಿಗೆ ವೇಳೆಯಲ್ಲಿ ತೀವ್ರ ರಕ್ತಸ್ರಾವವಾಗಿದ್ದರಿಂದ ಖಾನಾಪುರದಿಂದ ಬೆಳಗಾವಿಯ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಮೂರು ಗಂಟೆ ಸುಮಾರಿಗೆ ಬಾಣಂತಿನಿ ಕೂಡಾ ಮೃತಪಟ್ಟಿದ್ದಾಳೆ. 

ರಾಮನಗರದ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ಸೂಕ್ತ ಸೂಚನೆ ನೀಡಿದ್ದರೆ ಬಾಣಂತಿನಿಗೆ ಸಂಭವಿಸುವ ಸಾವನ್ನು ತಡೆಯಬಹುದಿತ್ತು. ಸತತ 10 ಗಂಟೆಗಳ ಕಾಲ ರಾಮನಗರ ಆಸ್ಪತ್ರೆಯಲ್ಲಿ ಇರಿಸಿಕೊಂಡು ಸಹಜ ಹೆರಿಗೆ ಅಸಾಧ್ಯವೆಂದು ತಿಳಿದು ಖಾನಾಪುರದ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.

300x250 AD

ಎಂಟು ವರ್ಷಗಳ ಹಿಂದೆ ನಾಗರಾಜ ನಾಯ್ಕ ನಮೃತಾ ಅವರನ್ನು ವಿವಾಹವಾಗಿದ್ದರು. ಅವರಿಗೆ ಆರು ವರ್ಷದ ಮಗಳಿದ್ದಾಳೆ. ನಮೃತಾ ಮೊದಲ ಹೆರಿಗೆ ಸಹಜವಾಗಿತ್ತು. ಆದರೆ ಇದೀಗ ಮಗು ಮತ್ತು ಹೆಂಡತಿಯ ಸಾವಿನಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಕೋಟ್
ರಾಮನಗರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗಾಗಿ ಸತತ 10 ಗಂಟೆಗಳ ಕಾಲ ಕಾದು ಕುಳಿತರೂ ನಂತರದಲ್ಲಿ ಏಕಾಏಕಿ ಹೆರಿಗೆ ಅಸಾಧ್ಯ ಎಂದು ಆರೋಗ್ಯ ಕೇಂದ್ರದವರು ಕೈ ಎತ್ತಿದರು. ಹಾಗಾದರೆ ಈ ಘಟನೆಗೆ ಯಾರು ಹೊಣೆಯಾಗಬೇಕು. ಇಲ್ಲಿನ ಆರೋಗ್ಯ ಕೇಂದ್ರದ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ.
   :: ನಾಗರಾಜ ನಾಯ್ಕ, ನಮ್ರತಾಳ ಪತಿ

Share This
300x250 AD
300x250 AD
300x250 AD
Back to top