Slide
Slide
Slide
previous arrow
next arrow

ಸಂಕಷ್ಠಿ: ಬೊಮ್ಮನಕೋಣೆಯಲ್ಲಿ ನಾದಪೂಜೆ ಸಂಗೀತ ಕಾರ್ಯಕ್ರಮ

300x250 AD

ಶಿರಸಿ: ಸಂಕಷ್ಠಿ ಪ್ರಯುಕ್ತ ಸ್ವರ ಸಂವೇದನಾ ಪ್ರತಿಷ್ಠಾನ (ರಿ.) ಗಿಳಿಗುಂಡಿ ಫೆ.28ರಂದು ಮಧ್ಯಾಹ್ನ 3-30 ರಿಂದ ರಾತ್ರಿ 8 ಗಂಟೆಯವರೆಗೆ ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ, ಬೊಮ್ಮನಕೋಣೆಯಲ್ಲಿ “ನಾದಪೂಜೆ” ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಗಾಯಕರಾಗಿ ಸತೀಶ್ ಹೆಗಡೆ, ಸಿದ್ದಾಪುರ, ಕುಮಾರಿ ಸ್ನೇಹಾ ಅಮ್ಮಿನಳ್ಳಿ ಭಾಗವಹಿಸಲಿದ್ದಾರೆ. ಗುರುಪ್ರಸಾದ್ ಹೆಗಡೆ, ಗಿಳಿಗುಂಡಿ ಇವರಿಂದ ಸಾರಂಗೀ ವಾದನ, ನಿರಂಜನ ಹೆಗಡೆ, ಜೋಗ ಭಟ್ಟರಕೇರಿ ಇವರಿಂದ ಬಾನ್ಸುರಿ ವಾದನ ಕಾರ್ಯಕ್ರಮಗಳು ನಡೆಯಲಿವೆ. ಸಹಕಲಾವಿದರುಗಳಾದ ನಿತಿನ್ ಹೆಗಡೆ, ಕಲಗದ್ದೆ, ವಿಜಯೇಂದ್ರ ಹೆಗಡೆ, ಅಜ್ಜಿಬಳ ಇವರಿಂದ ತಬಲಾ ಹಾಗೂ ದಿನೇಶ್ ಹೆಗಡೆ, ಗಿಳಿಗುಂಡಿ, ಅಜಯ್ ಹೆಗಡೆ, ಬೆಣ್ಣೇಮನೆ ಹಾರ್ಮೋನಿಯಂ ನುಡಿಸಲಿದ್ದಾರೆ.
ಮೊಕ್ತೇಸರರು, ಆರ್.ಡಿ. ಹೆಗಡೆ, ಜಾನ್ಮನೆ ಹಾಗೂ ಬೊಮ್ಮನಕೋಣೆ ಗ್ರಾಮಸ್ಥರ ಇವರ ಸಹಕಾರದಲ್ಲಿ ಕಾರ್ಯಕ್ರಮವು ನಡೆಯಲಿದೆ. ಸ್ವರ ಸಂವೇದನಾ ಪ್ರತಿಷ್ಠಾನ (ರಿ.) ಗಿಳಿಗುಂಡಿ ಯವರು ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತವನ್ನು ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top