ಮಲೆನಾಡು ‘ಶಿಕ್ಷಣ `ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಚಂದನ ಬಾಲವಾಡಿಯ ಪುಟಾಣಿ ಕಲರವ ಕಾರ್ಯಕ್ರಮವನ್ನು ಇಂದು ಶನಿವಾರ ಮಧ್ಯಾಹ್ನ 3.30ರಿಂದ ನೆಮ್ಮದಿ ಕುಟೀರ ಆವರಣದ ರಂಗಧಾಮದಲ್ಲಿ ನಡೆಯಲಿದೆ.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಿಯಾರ್ಡ್ಸ್ ಅಧ್ಯಕ್ಷ ಎಸ್.ಆರ್.ಹೆಗಡೆ ವಹಿಸಲಿದ್ದು, ಸಾಮಾಜಿಕ ಕಾರ್ಯಕರ್ತ ವಿ.ಪಿ.ಹೆಗಡೆ ಉದ್ಘಾಟಿಸಲಿದ್ದಾರೆ. ನೇತ್ರ ತಜ್ಞೆ ಡಾ.ತನುಶ್ರೀ ಬಹುಮಾನ ವಿತರಿಸಲಿದ್ದು, ಮಿಯಾರ್ಡ್ಸ್ ಕಾರ್ಯದರ್ಶಿ ಎಲ್.ಎಮ್.ಹೆಗಡೆ, ಆಡಳಿತಾಧಿಕಾರಿ ಮಾಧುರಿ ಶಿವರಾಂ ಉಪಸ್ಥಿತರಿರಲಿದ್ದಾರೆ.