Slide
Slide
Slide
previous arrow
next arrow

ಖಜುರಾಹೊ ನೃತ್ಯ ಹಬ್ಬ: ಗಿನ್ನಿಸ್ ದಾಖಲೆ ಬರೆದ ಕಥಕ್ ನೃತ್ಯ ತಂಡ

300x250 AD

ಖಜುರಾಹೊ:  ಅಂತರಾಷ್ಟ್ರೀಯ ಖ್ಯಾತಿಯ ಖಜುರಾಹೊ ನೃತ್ಯ ಹಬ್ಬ -2024 ಪ್ರಾರಂಭಗೊಂಡಿದ್ದು, ಮುಖ್ಯಮಂತ್ರಿ ಡಾ.ಮೋಹನ ಯಾದವ್ ಡೋಲು ಬಾರಿಸಿ ಉದ್ಘಾಟಿಸಿದರು.

ಒಂದು ವಾರ ಕಾಲ ನಡೆಯಲಿರುವ ಈ ನೃತ್ಯ ಹಬ್ಬದ ಸುವರ್ಣ ಮಹೋತ್ಸವ ಕೂಡ ಇದಾಗಿದೆ.  ಸಾವಿರಾರು ದೇಶ -ವಿದೇಶ ವಿಶೇಷ ಆಮಂತ್ರಿತ ಕಲಾಕಾರರು ಉಪಸ್ಥಿತಿಯಲ್ಲಿ ನಡೆದಿರುವ  ಇನ್ನೊಂದು ವಿಶ್ವ ದಾಖಲೆಯನ್ನು ಮಾಡುವ ಪ್ರಯತ್ನ ಕೂಡ ಇದೇ ಸಂದರ್ಭದಲ್ಲಿ ನಡೆಯಿತು.

300x250 AD

ಅಂದಾಜು 1500 ಕಥಕ್‌ ನರ್ತಕಿಯರು ಭಾಗವಹಿಸಿದ್ದ ಈ ಅಪೂರ್ವ ಕಾರ್ಯಕ್ರಮಕ್ಕೆ ನೆರೆದ ಜನಸ್ತೋಮ ಹಾಗೂ ಗಿನ್ನಿಸ್ ವಿಶ್ವ ದಾಖಲೆಯ ಅಧಿಕಾರಿಗಳ ತಂಡ ಸಾಕ್ಷಿಯಾಗಿದ್ದು, ಗಿನ್ನಿಸ್ ದಾಖಲೆಯ ಸಂಸ್ಥೆಯ ಮುಖ್ಯಸ್ಥೆ  “ಇದೊಂದು ವಿಶ್ವ ದಾಖಲೆ” ಎಂದು  ನೃತ್ಯ ಕಾರ್ಯಕ್ರಮದ ನಂತರ  ಪ್ರಕಟಿಸಿದರು.

Share This
300x250 AD
300x250 AD
300x250 AD
Back to top