Slide
Slide
Slide
previous arrow
next arrow

ರಸ್ತೆ ಡಾಂಬರೀಕರಣಕ್ಕೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

300x250 AD

ದಾಂಡೇಲಿ : ಗ್ರಾಮೀಣ ನೀರು ಸರಬರಾಜು ಇಲಾಖೆಯ ಆಶ್ರಯದಡಿ ನಗರದ ಹಳೆ ದಾಂಡೇಲಿಯಿಂದ ಕುಡಿಯುವ ನೀರು ಪೈಪ್ ಲೈನ್ ಅಳವಡಿಕೆ ಕಾಮಗಾರಿಯಿಂದಾಗಿ ರಸ್ತೆ ತೀವ್ರ ಹದಗೆಟ್ಟಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯಿಡೀ ಹೊಂಡಗುಂಡಿಗಳು ನಿರ್ಮಾಣವಾಗಿರುವ ಜೊತೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಸಂದರ್ಭದಲ್ಲಿ ಧೂಳು ಎಲ್ಲೆಡೆ ಹರಡುತ್ತಿದ್ದು, ಸ್ಥಳೀಯ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀಳುತ್ತಿದೆ. ರಸ್ತೆ ದುರಸ್ತಿಗಾಗಿ ಹಾಗೂ ಡಾಂಬರೀಕರಣಕ್ಕಾಗಿ ಸ್ಥಳೀಯರು ಸಾಕಷ್ಟು ಬಾರಿ ನಗರ ಸಭೆಗೆ ಹಾಗೂ ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿದ್ದರು. ಆದರೆ ಪೈಪ್ ಲೈನ್ ಕಾಮಗಾರಿ ಮುಗಿದಿದ್ದರೂ, ರಸ್ತೆ ದುರಸ್ತಿ ಮಾಡದೇ ಇರುವುದರಿಂದ ಹಳೆ ದಾಂಡೇಲಿ‌‌ ಭಾಗದ ಸಾರ್ವಜನಿಕರು ನಗರದ ಪಟೇಲ್ ವೃತ್ತದಲ್ಲಿ ಮಂಗಳವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕಳೆದ ಎರಡು, ಎರಡುವರೆ ವರ್ಷಗಳಿಂದ ಯುಜಿಡಿ ಹಾಗೂ ನೀರು ಸರಬರಾಜಿಗೆ ಸಂಬಂಧಪಟ್ಟಂತೆ ಪೈಪ್ ಲೈನ್ ಕಾಮಗಾರಿ ಸಲುವಾಗಿ ರಸ್ತೆಯನ್ನು ಅಗೆದಿರುವುದರಿಂದ ರಸ್ತೆ ತೀವ್ರ ಹದಗೆಟ್ಟು, ಅಲ್ಲಲ್ಲಿ ಹೊಂಡ – ಗುಂಡಿಗಳು ನಿರ್ಮಾಣವಾಗಿ, ಡಾಂಬರ್ ಸಂಪೂರ್ಣ ಕಿತ್ತು ಹೋಗಿ, ರಸ್ತೆಯಲ್ಲಿ ಪ್ರಯಾಣ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ನಿತ್ಯದ ಬವಣೆಯಾಗಿದೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ.ಎನ್.ಮಠದ್, ಪೌರಾಯುಕ್ತರಾದ ಆರ್.ಎಸ್ ಪವಾರ್, ಗ್ರಾಮೀಣ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸತೀಶ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ್, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಶೀದ್ ರಿತ್ತಿ ಪ್ರತಿಭಟನಾಕಾರರ ಜೊತೆ ಮಾತುಕತೆಯನ್ನು ನಡೆಸಿ, ನಾಳೆಯಿಂದಲೇ ರಸ್ತೆ ದುರಸ್ತಿ ಕಾಮಗಾರಿಗೆ ಚಾಲನೆಯನ್ನು ನೀಡಲಾಗುವುದೆಂದು ಭರವಸೆ ನೀಡಿದರು.

300x250 AD

ಅಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಪ್ರಮುಖರುಗಳಾದ ವಿಷ್ಣು ಕಾಮತ್, ಅನ್ವರ್ ಪಠಾಣ್, ಮೀಲಿಂದ್ ಕೋಡ್ಕಣಿ, ಬಾಬಾಸಾಬ್ ಜಮಾದಾರ, ರಾಜು ಕೋಡ್ಕಣಿ, ವಿನೋದ್ ಬಾಂದೇಕರ್, ಸತೀಶ್ ನಾಯ್ಕ, ಚಂದ್ರಕಾಂತ‌ ನಡಿಗೇರ, ಸರ್ಪರಾಜ್‌ ಮುಲ್ಲಾ, ಆರೀಪ್ ಖಾಜಿ, ಪಿರೋಜ್ ಫಿರ್ಜಾದೆ, ಮಧುಮಿತಾ‌ ಕೋಡ್ಕಣಿ, ತೌಫೀಕ್ ಸೈಯದ್, ಶಾಂತಕುಮಾರ್ ಮಹಾಲೆ, ಇಲಿಯಾಸ್ ಐನಾಪುರ, ಜಾನ್ ಡಿಸಿಲ್ವಾ ಮೊದಲಾದವರು ಹಾಗೂ ಹಳೆ ದಾಂಡೇಲಿ ಮತ್ತು ಪಟೇಲ್ ನಗರದ ನಾಗರಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top