Slide
Slide
Slide
previous arrow
next arrow

ಸೋಮಾನಿ ವೃತ್ತವನ್ನು ಶಿವಾಜಿ ವೃತ್ತವನ್ನಾಗಿ‌ ಮರು ನಾಮಕರಣ ಮಾಡುವಂತೆ ಮನವಿ

300x250 AD

ದಾಂಡೇಲಿ: ನಗರದ ಸೋಮಾನಿ ವೃತ್ತವನ್ನು ಶಿವಾಜಿ ವೃತ್ತವನ್ನಾಗಿ‌ ಮರು ನಾಮಕರಣ ಮಾಡುವಂತೆ ಶ್ರೀ.ಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ವತಿಯಿಂದ ಸಮಿತಿಯ ಪದಾಧಿಕಾರಿಗಳು  ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಛತ್ರಪತಿ ಮೂರ್ತಿ ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷ ವಿಶ್ವನಾಥ ಜಾಧವ,ನಾವು ಹಲವಾರು ವರ್ಷಗಳಿಂದ ಸೋಮಾನಿ ವೃತವನ್ನು ಶಿವಾಜಿ ವೃತ್ತವೆಂದು ಮರು ನಾಮಕರಣ ಮಾಡಲು ಒತ್ತಾಯಿಸುತ್ತಾ ಬಂದಿದ್ದೇವೆ. ಆದರೆ ನಮ್ಮ ಬೇಡಿಕೆ ಈವರೇಗೆ ಈಡೇರಿಲ್ಲ.  ಈಗಾಗಲೇ ವೃತ್ತದ ಹತ್ತಿರ ಭವ್ಯವಾದ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಪ್ರತಿವರ್ಷ ಶಿವಾಜಿ ಜಯಂತಿಯನ್ನು ಕೂಡ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದೇವೆ. ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವುಗಳು ಗೌರವ ಕೊಡುವುದು ಕೂಡ ಅಷ್ಟೆ ಮುಖ್ಯವಾಗಿದೆ. ಆದಷ್ಟು ಬೇಗನೆ ಸೋಮಾನಿ ವೃತ್ತವನ್ನು ಶ್ರೀ.ಛತ್ರಪತಿ ಶಿವಾಜಿ‌ ವೃತ್ತವನ್ನಾಗಿ ಮರು ನಾಮಕರಣ ಮಾಡಲು ಅಗತ್ಯ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಬಳಿಕ ಪೌರಾಯುಕ್ತರಾದ ಆರ್.ಎಸ್.ಪವಾರ್ ಈ ಮನವಿಯನ್ನು ಸರ್ಕಾರಕ್ಕೆ ತಲುಪಿಸುವುದಾಗಿ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಸುತಾರ್, ರಾಮಲಿಂಗ ಜಾಧವ, ನಾಗರಾಜ ಶಿಂದೆ, ಮಂಜುನಾಥ, ಪ್ರಶಾಂತ ಹುಲಕೊಪ್ಪಕರ, ಅರುಣ ಕುಂಬಾರ, ನಾಗೇಶ ಪಿಕಳೆ,  ಶೇಖರ, ಲಕ್ಷ್ಮಣ ಜಾಧವ, ನಾಗರಾಜ ಪಾಟೀಲ, ಕಾರ್ತಿಕ ರೇಡೆಕರ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top