ಶಿರಸಿ: ಹೊನ್ನಾವರ ಯಲಗುಪ್ಪಾದ ಕೆ.ರಮೇಶರಾವ್ ಅವರ ಮನೆಯಂಗಳದ ಸೀತಾರಾಮ ವೇದಿಕೆಯಲ್ಲಿ ಸ್ಥಳೀಯ ಸ್ವರಶ್ರೀ ಸಂಗೀತ ಶಾಲೆಯ ಐದನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ಮಾ.3ರಂದು ಸ್ವರ ಸಂಭ್ರಮ ಎಂಬ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಂದು ಮಧ್ಯಾಹ್ನ 3 ಗಂಟೆಯಿಂದ ಆರಂಭಗೊಳ್ಳುವ ಸಂಗೀತದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಗಾಯನ, ತಬಲಾ ಸೋಲೋ ನಡೆಯಲಿದ್ದು, ತದನಂತರದಲ್ಲಿ ಹಡಿನಬಾಳದ ಸಂಗೀತಾ ನಾಯ್ಕ ಗಾಯನ,ನಂತರ ಪ್ರಕಾಶ ಹೆಗಡೆ ಕಲ್ಲಾರೆಮನೆ ಬಾನ್ಸುರಿ ವಾದನ ನಡೆಯಲಿದೆ.
ನಂತರ ಸ್ವರಶ್ರೀಯ ಪ್ರಾಚಾರ್ಯೆ ಶ್ರೀಲತಾ ಗುರುರಾಜ್ ತಮ್ಮ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ. ನಂತರ ಆಮಂತ್ರಿತ ಕಲಾವಿದ ಡಾ. ಅಶೋಕ ಹುಗ್ಗಣ್ಣನವರ ಅವರಿಂದ ಗಾನಸುಧೆ ನಡೆಯಲಿದೆ. ಹಾರ್ಮೋನಿಯಂನಲ್ಲಿ ವಿ. ಪ್ರಕಾಶ ಹೆಗಡೆ ಯಡಳ್ಳಿ, ಅಂಜನಾ ಹೆಗಡೆ ಶಿರಸಿ, ಮನೋಜ ಭಟ್ಟ ಸಹಕರಿಸಲಿದ್ದು, ತಬಲಾದಲ್ಲಿ ಅಲ್ಲಮ ಪ್ರಭು ಕಡಕೋಳ, ಸ್ವರಶ್ರೀ ಮುಖ್ಯಸ್ಥ ಗುರುರಾಜ ಆಡುಕಳ ಹಾಗೂ ವಿನಾಯಕ ಭಟ್ಟ ಹರಡಸೆ ಸಾಥ್ ನೀಡಲಿದ್ದಾರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.