Slide
Slide
Slide
previous arrow
next arrow

ಆಟೋ ಚಾಲಕರನ್ನು ಕಾರ್ಮಿಕ ವಲಯಕ್ಕೆ ಸೇರಿಸಲು ಆಗ್ರಹ

300x250 AD

ಕಾರವಾರ: ಆಟೋ ರಿಕ್ಷಾ ಚಾಲಕರನ್ನು ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಿ ಕಟ್ಟಡ ಕಾರ್ಮಿಕರಿಗೆ ನೀಡುವ ಸವಲತ್ತು ಆಟೋ ಚಾಲಕರಿಗೂ ಕೊಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘದ ಅಧ್ಯಕ್ಷ ಶಿವರಾಜ್ ಮೆಸ್ತಾ ಆಗ್ರಹಿಸಿದರು.

ಅವರು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕೂಲಿ ಕೆಲಸಕ್ಕೆ ಹೋಗುವವರು 800-100 ರೂಪಾಯಿ ದುಡಿಯುತ್ತಾರೆ. ಆದರೆ ಬೆಳಿಗ್ಗೆಯಿಂದ ರಾತ್ರಿ ತನಕ ದುಡಿದರು ಆಟೋದವರು  500 ರೂಪಾಯಿ ದುಡಿಯಲು ಆಗುತ್ತಿಲ್ಲ. ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇದುವರೆಗೂ ಯಾವ ಸರಕಾರ ಕೂಡಾ ಆಟೋರಿಕ್ಷಾ ಚಾಲಕರ, ಮಾಲಿಕರ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಿಲ್ಲ. ಲೋಕಸಭಾ ಚುನಾವಣೆಯಲ್ಲಾದರು ಆಟೋ ಚಾಲಕರನ್ನ ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಯಾವುದಾದರು ಪಕ್ಷ ಮಾಡಲಿ ಎಂದರು.

ಆಟೋ ಚಾಲಕ ಹಾಗೂ ಮಾಲಕರ ಸಂಘದ ಉತ್ತರ ಕರ್ನಾಟಕ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಸಚಿವ ಎಚ್ ಕೆ ಪಾಟೀಲ್, ಸಚಿವ ಸಂತೋಷ್ ಲಾಡ್ ಸರಕಾರದಿಂದ ಸಹಾಯ ಹಸ್ತ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಬಜೆಟ್‌ನಲ್ಲಿ ಯಾವುದೇ ಘೋಷಣೆಯಾಗಿಲ್ಲ. ಇದರಿಂದ ಬೇಸರವಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಆಟೋರಿಕ್ಷಾ ಚಾಲಕರು, ಮಾಲಿಕರು ಜೀವನ ನಡೆಸುವುದೇ ದುಸ್ತರವಾಗಿದೆ. ಹೀಗಿರುವಾಗ ಸರಕಾರ ಯಾವುದೇ ಸವಲತ್ತು ನೀಡದೇ ಕೈ ಚೆಲ್ಲಿದರೆ ಹೇಗೆ? ಎಂದು ಪ್ರಶ್ನಿಸಿದರು.
ಆಟೋರಿಕ್ಷಾ ಚಾಲಕರಿಗೂ ಸರಕಾರದ ಸಹಾಯ ಹಸ್ತ ಬೇಕಿದೆ. ಆಟೋ ಚಾಲಕ, ಮಾಲಕರ ಕುಟುಂಬದ ರಕ್ಷಣೆಯ ಸಲುವಾಗಿ ಪ್ರತ್ಯೇಕ ಆಟೋ ರಿಕ್ಷಾ ಕಲ್ಯಾಣ ನಿಗಮ ಸ್ಥಾಪಿಸಬೇಕು. ಅಲ್ಲದೇ ಉಚಿತ ಆರೋಗ್ಯ ವಿಮೆ, ಆಟೋ ಚಾಲಕ ಮಾಲಕ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ, 60 ವರ್ಷಕ್ಕಿಂತ ಮೇಲ್ಪಟ್ಟ ಆಟೋ ಚಾಲಕರಿಗೆ ಪಿಂಚಣಿ ವ್ಯವಸ್ಥೆ ಮಾಡಲಿ ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಟಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯ ನಾಯ್ಕ, ಉಪಾಧ್ಯಕ್ಷ ವಿಶ್ವನಾಥ ಚಿಪಗಿ, ಕಾರವಾರ-ಅಂಕೋಲಾ ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ರಾಘು ನಾಯ್ಕ ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top