Slide
Slide
Slide
previous arrow
next arrow

ಇಂದು ಮಾರಿಕಾಂಬಾ ದೇವಿ ವಾರ್ಷಿಕೋತ್ಸವ: ನಾಟಕ ಪ್ರದರ್ಶನ

300x250 AD

ಶಿರಸಿ:ತಾಲೂಕಿನ ಬರೂರಿನ ಮಾರಿಕಾಂಬಾ ದೇವಿಯ ವಾರ್ಷಿಕೋತ್ಸವ ಪ್ರಯುಕ್ತ ಇಂದು ಮಂಗಳವಾರ ಸಾಮೂಹಿಕ ಸತ್ಯನಾರಾಯಣ ವೃತಕಥೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 8 ಘಂಟೆಯಿಂದ ಮಕ್ಕಳ ಮನರಂಜನಾ ಕಾರ್ಯಕ್ರಮ. 9 ಘಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಸ್ಕೋಡ್ ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ, ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ, ಕುಳವೆ ಗ್ರಾಪಂ ಅಧ್ಯಕ್ಷೆ ರಂಜಿತಾ ಹೆಗಡೆ, ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ, ಸದಸ್ಯರಾದ ಸಂದೇಶ ಭಟ್ಟ ಬೆಳಖಂಡ, ಗಂಗಾಧರ ನಾಯ್ಕ, ಜ್ಯೋತಿ ನಾಯ್ಕ ಕಾನಮೂಲೆ, ಕುಳವೆ ಸೊಸೈಟಿ ಅಧ್ಯಕ್ಷ ಚಾರುಚಂದ್ರ ಭಟ್ಟ ಕುಳವೆ, ಉಪಾಧ್ಯಕ್ಷ ಪ್ರಭಾಕರ ನಾಯ್ಕ ನೇಗಾರ, ವಕೀಲ ಪ್ರಶಾಂತ ನಾಯ್ಕ ನೇಗಾರ ಪಾಲ್ಗೊಳ್ಳಲಿದ್ದಾರೆ.
   ರಾತ್ರಿ 10.30 ರ ನಂತರ ಶ್ರೀ ಲಕ್ಷ್ಮೀನರಸಿಂಹ ಜಾನಪದ ನಾಟ್ಯ ಕಲಾಸಂಘದ ಇವರಿಂದ “ಹೆಣ್ಣಿಗಾಗಿ ಮಣ್ಣಿಗಾಗಿ” ನಾಟಕ ಪ್ರದರ್ಶನವಾಗಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top