Slide
Slide
Slide
previous arrow
next arrow

ಎಂಪ್ಲೋಯ್ ಪ್ರೀಮೀಯರ್ ಲೀಗ್: ಕುರುಕ್ಷೇತ್ರ ಫೈಟರ್ಸ್ ಚಾಂಪಿಯನ್

300x250 AD

ಭಟ್ಕಳ: ತಾಲೂಕಿನ ಪೋಲೀಸ್ ಮೈದಾನದಲ್ಲಿ ನಡೆದ ಎಂಪ್ಲೋಯ್ ಪ್ರೀಮಿಯರ್ ಲೀಗ್ ಸೀಸನ್ 3
ಕ್ರಿಕೆಟ್ ನ ಫೈನಲ್ ಪಂದ್ಯಾವಳಿಯಲ್ಲಿ ಚಕ್ರವ್ಯೂಹ ವಾರಿಯರ್ಸ್ ತಂಡವನ್ನು ಮಣಿಸಿದ ಕುರುಕ್ಷೇತ್ರ ಫೈಟರ್ಸ್ ತಂಡವು ಟ್ರೋಫಿ ಗೆಲ್ಲುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಈ ಪಂದ್ಯಾವಳಿಯಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದು. ಫೈನಲ್ ಪಂದ್ಯದಲ್ಲಿ ಚಕ್ರವರ್ತಿ ಫೈಟರ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 8 ಓವರನಲ್ಲಿ 5 ವಿಕಟ್ ನಷ್ಟಕ್ಕೆ 77 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನಟ್ಟಿದ ಚಕ್ರವ್ಯೂಹ ವಾರಿಯರ್ಸ್ ತಂಡ 8 ಓವರನಲ್ಲಿ 6 ವಿಕೆಟ್ ಕಳೆದುಕೊಂಡು 66 ರನ್ ಕಲೆಹಾಕಲು ಸಾಧ್ಯವಾಯಿತು. 11 ರನ್ ಗಳಿಂದ ಕುರುಕ್ಷೇತ್ರ ಫೈಟರ್ಸ್ ತಂಡವು ಫೈನಲ್ ಪಂದ್ಯ ಗೆಲ್ಲುವುದರ ಮೂಲಕ ಎಂಪ್ಲೋಯ್ ಪ್ರೀಮಿಯರ್ ಲೀಗ್ ಭಟ್ಕಳ ಸೀಸನ್ 3 ನ ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕುರುಕ್ಷೇತ್ರ ತಂಡದ ಚಂದ್ರಕಾಂತ ಕಂಬಾರ ಪಾಲಾದರೆ, 4 ವಿಕೆಟ್ ಪಡೆದು 117 ರನ್ ಗಳಸಿದ ವಾಸು ಮೊಗೇರ ಬೆಸ್ಟ್ ಬ್ಯಾಟ್ಸ್ಮನ್ ಆದರೆ, ಚಕ್ರವ್ಯೂಹ ವಾರಿಯರ್ಸ್ ತಂಡದ ಅಭಿಜಿತ್ ನಾಯ್ಕ 5 ಪಂದ್ಯದಲ್ಲಿ 9ವಿಕೆಟ್ ಪಡೆಯುವುದರ ಮೂಲಕ ಬೆಸ್ಟ್ ಬೌಲರ್ ಆಗಿದ್ದಾರೆ. ಅದೇ ರೀತಿ ಸರಣಿ ಶೇಷ್ಠ ಪ್ರಶಸ್ತಿ ಶೇಖರ ಗೊಂಡ ,ಬೆಸ್ಟ್ ಪಿಲ್ಡರ್ ಮೋಹನ ಗೊಂಡ, ಬೆಸ್ಟ್ ವಿಕೆಟ್ ಕೀಪರ್ ಶೇಖರ್ ಪೂಜಾರಿ, ಬೆಸ್ಟ್ ಕ್ಯಾಚ್ ಚಕ್ರವ್ಯೂಹ ತಂಡದ ಭಾಸ್ಕರ್ ದೇವಾಡಿಗ, ಅತಿ ಹೆಚ್ಚು ಸಿಕ್ಸ್ ಗಳಿಸಿದ ಲೋಹಿತ್ ನಾಯ್ಕ ಮೋಸ್ಟ್ ಸಿಕ್ಸರ್ಸ್ ಪ್ರಶಸ್ತಿ ಹಾಗೂ ಶಿಸ್ತಿನ ತಂಡವಾಗಿ ಪವರ್ ಸ್ಟಾರ್ ತಂಡ ಹೊರಹೊಮ್ಮಿದೆ

300x250 AD

ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಕ್ರೀಡೆಯಲ್ಲಿ ಸಾಧನೆ ಗೈದ ಇಬ್ಬರು ಸರ್ಕಾರಿ ನೌಕರರನ್ನು ಸನ್ಮಾನಿಸಿದರು. ಅದೇ ರೀತಿ ಬೆಂಕಿ ಅವಘಡದಲ್ಲಿ ಗಾಯಗೊಂಡ ಮಾರುಕೇರಿ ಮೂಲದ ಯುವಕನಿಗೆ ಸಹಾಯ ನೀಡಿದರು.ಉದ್ಯಮಿ ಹಾಗೂ ಸಮಾಜ ಸೇವಕ ಫಾರಾನ್ ಅವರಿಗೆ ಸನ್ಮಾನಿಸಿ ಗೌರವಿಸಿದರು.

Share This
300x250 AD
300x250 AD
300x250 AD
Back to top