Slide
Slide
Slide
previous arrow
next arrow

ದಾಂಡೇಲಿ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

300x250 AD

ದಾಂಡೇಲಿ : ಈ ತಿಂಗಳ ಅಂತ್ಯದೊಳಗೆ ನಡೆಯಲಿರುವ ದಾಂಡೇಲಿ ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ ಸಮಾರಂಭವು ನಗರ ಸಭೆಯ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

ಲಾಂಛನವನ್ನು ಬಿಡುಗಡೆಗೊಳಿಸಿ ಮಾತನಾಡಿದ ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್, ದಾಂಡೇಲಿ ತಾಲೂಕಿನ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಅತ್ಯಂತ ಸುಂದರವಾದ ಹಾಗೂ ಅರ್ಥಪೂರ್ಣವಾದ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ. ದಾಂಡೇಲಿಯಲ್ಲಿರುವಂತಹ ಎಲ್ಲ ಮಹತ್ವದ ಸಂಗತಿಗಳು ಹಾಗೂ ದಾಂಡೇಲಿಯ ಗುರುತುಗಳನ್ನು ಲಾಂಛನದಲ್ಲಿ ಚಿತ್ರಿಸಲಾಗಿದೆ. ದಾಂಡೇಲಿ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಕನ್ನಡದ ನುಡಿ ಹಬ್ಬವಾಗಿರುವ ಸಾಹಿತ್ಯ ಜಾತ್ರೆಯನ್ನು ಯಶಸ್ವಿಗೊಳಿಸಲು ನಗರಾಡಳಿತ ಎಲ್ಲಾ ರೀತಿಯಿಂದಲೂ ಸಹಕಾರ ನೀಡುತ್ತದೆ ಎಂದರು

ತಹಶೀಲ್ದಾರ್ ಎಂ. ಎನ್. ಮಠದ, ಮಾತನಾಡಿ ಸಾಹಿತ್ಯ ಸಮ್ಮೇಳನ ಸಂಘಟಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ತಾಲೂಕಾಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿಎನ್. ವಾಸರೆ ಅವರು ಸಮ್ಮೇಳನದ ಸಂಘಟನೆಯ ರೂಪರೇಶೆ ಬಗ್ಗೆ ತಿಳಿಸಿ, ಸಮ್ಮೇಳನಕ್ಕೆ ಸರಕಾರದಿಂದ ಹಾಗೂ ಸಾಹಿತ್ಯ ಪರಿಷತ್ತಿನಿಂದ ಯಾವುದೇ ಅನುದಾನವಿಲ್ಲ. ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಅಯೋಜಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದರು.

ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎಸ್. ಪ್ರಕಾಶ ಶೆಟ್ಟಿ ಅವರು ಮಾತನಾಡಿ ದಾಂಡೇಲಿ ಇದು ಸಾಂಸ್ಕೃತಿಕ ನಗರಿಯಾಗಿದ್ದು, ಇಂತಹ ಸಮೃದ್ಧವಾಗಿರುವ ದಾಂಡೇಲಿಯಲ್ಲಿ ನಡೆಯುತ್ತಿರುವ ಈ ಸಮ್ಮೇಳನವನ್ನ ಯಶಸ್ಸುಗೊಳಿಸಲು ಎಲ್ಲರೂ ತನು ಮನ ಧನದಿಂದ ಸಹಕರಿಸಬೇಕು. ನಾಡು,ನುಡಿಯ ಕೆಲಸ ಅದೊಂದು ಪುಣ್ಯದ ಕೆಲಸವಾಗಿದೆ ಎಂದರು.

300x250 AD

ನಗರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷೆ ಶಾಹಿದಾ ಪಠಾಣ್ , ಕರ್ನಾಟಕ ಸಂಘದ ಅಧ್ಯಕ್ಷ ಯು.ಎಸ್. ಪಾಟೀಲ್ ಸಾಂದರ್ಭಿಕವಾಗಿ ಮಾತನಾಡಿ ತಮ್ಮ ಸಹಕಾರ ವ್ಯಕ್ತಪಡಿಸಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರ ಸಹಕಾರ ಕೋರಿದರು.

ಈ ಸಂದರ್ಭದಲ್ಲಿ ನಗರಸಭೆಯ ನಿಕಟಪೂರ್ವ ಅಧ್ಯಕ್ಷೆ ಸರಸ್ವತಿ ರಜಪೂತ, ನಿಕಟಪೂರ್ವ ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಸದಸ್ಯರಾದ ಅನಿಲ ನಾಯ್ಕರ, ಮೋಹನ ಹಲವಾಯಿ, ಬುದ್ದಿವಂತ ಗೌಡ ಪಾಟೀಲ,ದಶರಥ ಬಂಡಿವಡ್ಡರ, ರುಕ್ಮಿಣಿ ಬಾಗಡೆ , ರಮಾ ರವೀಂದ್ರ , ಮಹಾದೇವ ಜಮಾದರ , ಸಿ.ಆರ್.ಪಿಗಳಾದ ಲಲಿತಾ ಪುಟ್ಟೇಗೌಡ ಮತ್ತು ಶ್ರೀದೇವಿ, ಕಸಾಪ ಜಿಲ್ಲಾ ಗೌರವ ಕೋಶಾದ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ, ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಕೃಷ್ಣ ಪಾಟೀಲ್, ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಗುರುಶಾಂತ ಜಡೆಹಿರೇಮಠ, ಕೋಶಾಧ್ಯಕ್ಷ ಶ್ರೀಮಂತ ಮದರಿ, ಸದಸ್ಯರಾದ ಕಲ್ಪನಾ ಪಾಟೀಲ್ , ಸುರೇಶ್ ಪಾಲಕರ ಹನುಮಂತ ಕಾರ್ಗಿ, ಪ್ರಮುಖರಾದ ದುಂಡಪ್ಪ ಗೂಳೂರ, ದಿವಾಕರ ನಾಯ್ಕ, ಎಸ್. ಎಸ್. ಕುರುಡೇಕರ್, ಗೌರೀಶ ಬಾಬ್ರೇಕರ್, ರವಿ ಸುತಾರ, ಎಂ.ಆರ್. ನಾಯಕ, ರಾಮಲಿಂಗ ಜಾಧವ್, ಪ್ರಾನ್ಸಿಸ್ ಮಸ್ಕರೇನಸ್ ಮೊದಲಾದವರು ಉಪಸ್ಥಿತರಿದ್ದರು. ಕಸಾಪ ಕಾರ್ಯದರ್ಶಿ ಪ್ರವೀಣ ನಾಯ್ಕ ಸ್ವಾಗತಿಸಿದರು. ಪದಾಧಿಕಾರಿ ಎನ್.ಆರ್. ನಾಯ್ಕ ವಂದಿಸಿದರು.

Share This
300x250 AD
300x250 AD
300x250 AD
Back to top