Slide
Slide
Slide
previous arrow
next arrow

‘ಅರಣ್ಯಾಧಿಕಾರಿ ಹುದ್ದೆ ನೇಮಕಾತಿಯಲ್ಲಿ ಅರಣ್ಯಶಾಸ್ತ್ರ ಪದವೀಧರರನ್ನು ಪರಿಗಣಿಸಿ’

300x250 AD

ಶಿರಸಿ: ಅರಣ್ಯ ಅಧಿಕಾರಿ ಹುದ್ದೆಯ ನೇಮಕಾತಿಯಲ್ಲಿ, ಅರಣ್ಯಶಾಸ್ತç ಪದವಿಯನ್ನೇ ಕನಿಷ್ಟ ವಿದ್ಯಾರ್ಹತೆಯನ್ನಾಗಿ ಪರಿಗಣಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಸರ್ಕಾರಕ್ಕೆ ಆಗ್ರಹಿಸಿದೆ.

 ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಗುರುವಾರ ೧೫ ರಂದು ಬೆಂಗಳೂರಿನಲ್ಲಿ ಅರಣ್ಯ ಸಚಿವರನ್ನ ಭೇಟ್ಟಿಯಾಗಿ ಮೇಲಿನಂತೆ ಮನವಿ ನೀಡಿ ಆಗ್ರಹಿಸಿದರು.

 ಅರಣ್ಯ ಅಧಿಕಾರಿಗಳನ್ನ ನೇಮಿಸುವಲ್ಲಿ, ಅರಣ್ಯಶಾಸ್ತ್ರ ಪಧವಿಧರರನ್ನ ಅರಣ್ಯಶಾಸ್ತ್ರದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಪದವಿಧರ ಜ್ಞಾನ ಮತ್ತು ಅನುಭೋಗಗೊಳಿಸುವುದು ಅವಶ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತದ ಅರಣ್ಯ ನೀತಿ ಸಹ ವೃತ್ತಿ ಪರ ಅರಣ್ಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದ್ದು, ಅಲ್ಲದೇ ವೈಜ್ಞಾನಿಕವಾಗಿ ಅರಣ್ಯ ಸಂರಕ್ಷಿಸಲು ತಾಂತ್ರಿಕ ಅರಣ್ಯ ಶಿಕ್ಷಣದ ಮಹತ್ವ ಅವಶ್ಯವಿರುವುದರಿಂದ ಅರಣ್ಯ ಪದವಿಧರರನ್ನೇ ಅರಣ್ಯಾಧಿಕಾರಿಗಳನ್ನಾಗಿ ನೇಮಿಸಬೇಕೆಂದು ಅವರು ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ.

300x250 AD

 ಈ ಸಂದರ್ಭದಲ್ಲಿ ಹೋರಾಟಗಾರರ ವೇದಿಕೆಯ ಪ್ರಧಾನ ಸಂಚಾಲಕರಾದ ಜಿ ಎಮ್ ಶೆಟ್ಟಿ ಅಚಿವೆ ಮತ್ತು ರಾಮ ಮೊಗೇರ್ ಅಳ್ವೆಕೋಡಿ ಅವರು ಉಪಸ್ಥಿತರಿದ್ದರು.

ಹೋರಾಟಕ್ಕೆ ಬೆಂಬಲ:
 ಅರಣ್ಯಶಾಸ್ತ್ರ ಪದವಿಧರರನ್ನು ಅರಣ್ಯ ಅಧಿಕಾರಿಗಳ ನೇಮಕಾತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಪರಿಗಣಿಸಬೇಕೆಂದು ಆಗ್ರಹಿಸಿ, ಅರಣ್ಯಶಾಸ್ತ್ರ ಪದವಿ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಿಂದ ಜರಗಿಸುತ್ತಿರುವ ಹೋರಾಟಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಸಂಪೂರ್ಣವಾಗಿ ಬೆಂಬಲಿಸುತ್ತಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಅವರು ತಿಳಿಸಿದರು.

Share This
300x250 AD
300x250 AD
300x250 AD
Back to top