Slide
Slide
Slide
previous arrow
next arrow

ಹಾರ್ನ್‌ಬಿಲ್ ಹಬ್ಬದಲ್ಲಿ ವಿವಿಧ ಕಾರ್ಯಕ್ರಮ, ಬಹುಮಾನ ವಿತರಣೆ: ಡಿ.ಎಫ್.ಓ. ಮಾಹಿತಿ

300x250 AD

ದಾಂಡೇಲಿ: ನಗರದ ಹಾರ್ನ್ ಬಿಲ್ ಭವನದಲ್ಲಿ ಫೆ.17 ಮತ್ತು 18 ರಂದು ಹಾರ್ನಬಿಲ್ ಹಬ್ಬದ ನಡೆಯಲಿದ್ದು, ದೇಶ ಹಾಗೂ ರಾಜ್ಯದ ಪಕ್ಷಿ ಪ್ರಿಯರು ಈ ಹಬ್ಬದಲ್ಲಿ ಭಾಗವಹಿಸಲಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತಕುಮಾರ.ಕೆ.ಸಿ ಗುರುವಾರ ನಗರದ ಅರಣ್ಯ ಇಲಾಖೆಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಎರಡು ದಿನಗಳ ಕಾಲ ನಡೆಯುವ ಈ ಹಬ್ಬದ ಉದ್ಘಾಟನೆಯ ಮುನ್ನ ಫೆಬ್ರವರಿ 17 ರ ಶನಿವಾರ ಬೆಳಗ್ಗೆ 8 ಗಂಟೆಗೆ ನಗರಸಭೆ ಆವರಣದಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳೊಂದಿಗೆ, ಡಮಾಮಿ ನೃತ್ಯ, ಡೊಳ್ಳು ಕುಣಿತ, ಕಂಸಾಳೆ ಹಾಗೂ ವಿವಿಧ ಕಲಾ ತಂಡಗಳ ಭಾಗವಹಿಸುವಿಕೆಯಲ್ಲಿ ಹಾರ್ನ್ ಬಿಲ್ ಜಾಗೃತಿ ಜಾಥಾ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಹಾರ್ನ್ ಬಿಲ್ ಭವನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದದಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಚಿಟ್ಟೆಗಳ ಕುರಿತು ಪುಸ್ತಕ ಬಿಡುಗಡೆ ನಡೆಯಲಿದೆ. ಅರಣ್ಯ ಇಲಾಖೆ ವಿವಿಧ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಅನಂತರ ಹಾರ್ನ್ ಬಿಲ್ ಪಕ್ಷಿ ಜೀವನ ಕ್ರಮ ಹಾಗೂ ಸಂತತಿ, ಅದರ ರಕ್ಷಣೆಯ ಕುರಿತಂತೆ 5 ವಿಭಾಗದಲ್ಲಿ ತಾಂತ್ರಿಕ ವಿಚಾರ ಗೋಷ್ಠಿಗಳು ನಡೆಯಲಿವೆ‌. ಹಾರ್ನಬಿಲ್ ಪಕ್ಷಿ ಜಾಗೃತಿಗಾಗಿ ಚಿತ್ರಕಲಾ, ನಿಬಂಧ, ರಸಪ್ರಶ್ನೆ, ಕ್ಲೇ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ. ಪಕ್ಷಿ ತಜ್ಞರೊಂದಿಗೆ ಪಕ್ಷಿ ವೀಕ್ಷಣೆ ಹಾಗೂ ಕ್ಷೇತ್ರ ಕಾರ್ಯ ಚಟುವಟಿಕೆಗಳು ಹಾಗೂ ಸಫಾರಿ ನಡೆಯಲಿದೆ. ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

300x250 AD

ಫೆಬ್ರವರಿ 18, ಭಾನುವಾರ ತಾಂತ್ರಿಕ ವಿಭಾಗದ ಎರಡು ವಿಚಾರ ಗೋಷ್ಠಿಗಳು ಹಾಗೂ ಹಾರ್ನ್ ಬಿಲ್ 2.0 ವಿಶೇಷ ಚರ್ಚಾ ಕಾರ್ಯಕ್ರಮ ನಡೆಯಲಿದೆ.

ಅಂದು ಸಮಾರೋಪ ಸಮಾರಂಭದಲ್ಲಿ ರಾಜ್ಯ ಆಡಳಿತ ಸಧಾರಣಾ ಆಯೋಗದ ಅಧ್ಯಕ್ಷರು ಮತ್ತು ಶಾಸಕರಾದ ಆರ್.ವಿ. ದೇಶಪಾಂಡೆ ಅವರು ಭಾಗವಹಿಸಲಿದ್ದಾರೆ.
ಹಕ್ಕಿ ಹಬ್ಬದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪರಿಣಿತರು ಹಾರ್ನಬಿಲ್ ಕುರಿತು ಏರ್ಪಡಿಸಲಾಗುವ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ವಿಚಾರ ಮಂಡಿಸಿ, ಪಕ್ಷಿ ಸಂರಕ್ಷಣೆ ಹಾಗೂ ಸಂತತಿ ಬೆಳವಣಿಗೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಸ್ಥಳೀಯರ ಸಹಭಾಗಿತ್ವದಲ್ಲಿ ಹಾರ್ನ್ ಬಿಲ್ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಎ.ಸಿ.ಎಫ್ ಸಂತೋಷ್ ಚವ್ಹಾಣ್, ವಲಯಾರಣ್ಯಾಧಿಕಾರಿಗಳಾದ ಅಪ್ಪಾರಾವ್ ಕಲಶೆಟ್ಟಿ, ಸಂಗಮೇಶ ಪಾಟೀಲ, ಬಸವರಾಜ್.ಎಂ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top