Slide
Slide
Slide
previous arrow
next arrow

ಗುಜರಾತ್‌ ರಾಜ್‌ಕೋಟ್‌ನಲ್ಲಿ ಟಿ.ಎಸ್.ಎಸ್.ಅಡಿಕೆ ಡಿಪೋ ಆರಂಭ

300x250 AD

ಶಿರಸಿ: ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ (ಉ.ಕ) ಇದರ ಅಡಿಕೆ ವಿತರಕರಾದ ನವಾಜ್ ಟ್ರೇಡರ್ಸ್ ಅಹಮದಾಬಾದ್ ಇವರ ಮಾಲಿಕತ್ವದ ವಿಸ್ತರಿತ ಶಾಖೆ “ಟಿ.ಎಸ್.ಎಸ್ ಅಡಿಕೆ ಡಿಪೋ” ವ್ಯಾಪಾರಿ ಮಳಿಗೆಯನ್ನು ಫೆ.15ರಂದು ಗುಜರಾತ್ ರಾಜ್ಯದ ರಾಜಕೋಟ್‌ನಲ್ಲಿ ಸಂಘದ ಅಧ್ಯಕ್ಷರಾದ ಗೋಪಾಲಕೃಷ್ಣ ವೆಂ. ವೈದ್ಯ ಮತ್ತಿಘಟ್ಟ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಈ ಅಡಿಕೆ ಡಿಪೋನಿಂದ ಟಿ.ಎಸ್.ಎಸ್ ಸಂಸ್ಥೆಯ ಅಡಿಕೆ ವಹಿವಾಟು ಸೌರಾಷ್ಟ್ರ ಭಾಗದಲ್ಲಿ ವಿಸ್ತರಣೆಯಾಗಿ ನಮ್ಮ ಅಡಿಕೆಗೆ ಇನ್ನೂ ಹೆಚ್ಚಿನ ಬೇಡಿಕೆ ಬರುವಂತಾಗಲಿ ಎಂದು ಆಶಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಂಘದ ನಿರ್ದೇಶಕರಾದ ನರಸಿಂಹ ಜಿ. ಹೆಗಡೆ ಬಾಳೆಗದ್ದೆ ಮಾತನಾಡಿ, ಈಗಾಗಲೇ ಅಹಮದಾಬಾದ್‌ನಲ್ಲಿ ವ್ಯಾಪಾರಿ ಮಳಿಗೆ ಹೊಂದಿದ್ದು ವಿಸ್ತರಿತ ಅಡಿಕೆ ಡಿಪೋವನ್ನು ರಾಜಕೋಟ್‌ನಲ್ಲಿ ತೆರೆದಿದ್ದಕ್ಕೆ ನವಾಜ್ ಟ್ರೇಡರ್ಸ್ ಮಾಲಿಕರಿಗೆ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ನವಾಜ್ ಟ್ರೇಡರ್ಸ್ ಅಹಮದಾಬಾದ್ ಇದರ ಮಾಲಿಕರಾದ ಮಕ್ಸುದ್ ಎಚ್. ಸಾಯಾ, ನವಾಜ್ ಎಂ. ಸಾಯಾ, ಬಷೀರ್ ಮನ್ಸೂರಿ, ರಾಜಕೋಟ್‌ನ ಹೋಲ್‌ಸೇಲ್ ಸುಪಾರಿ ಅಸೋಸಿಯೇಶನ್ ಅಧ್ಯಕ್ಷರಾದ ನಾರಾಯಣ ಭಾಯ್ ಪಟೇಲ್, ಸೌರಾಷ್ಟ್ರ ಅಡಿಕೆ ಮತ್ತು ತಂಬಾಕು ಅಸೋಸಿಯೇಶನ್ ಅಧ್ಯಕ್ಷರಾದ ಮೋಹನ್ ಭಾಯ್ ಅಸ್ರಾನಿ, ಸಂಘದ ಅಡಿಕೆ ವ್ಯಾಪಾರಿ ವಿಭಾಗದ ಮುಖ್ಯಸ್ಥರಾದ ರಾಮಚಂದ್ರ ಭಟ್ಟ ಇವರುಗಳು ಹಾಗೂ ರಾಜಕೋಟ್‌ನ ಎಲ್ಲಾ ವ್ಯಾಪಾರಸ್ಥರುಗಳು ಮತ್ತು ನಾಗಪುರದ ಕೆಲವು ವ್ಯಾಪಾರಸ್ಥರು ಹಾಜರಿದ್ದರೆಂದು ಪ್ರಕಟಣೆಯಲ್ಲಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top