Slide
Slide
Slide
previous arrow
next arrow

ಶ್ರೀಸಿದ್ಧಿವಿನಾಯಕ ದೇವರ ವರ್ಧಂತಿ ಉತ್ಸವ ಸಂಪನ್ನ

300x250 AD

ದಾಂಡೇಲಿ : ನಗರದ ಟಿಂಬರ್ ಡಿಪೋ ಪ್ರವೇಶ ದ್ವಾರದ ಹತ್ತಿರವಿರುವ ಶ್ರೀ.ಸಿದ್ಧಿವಿನಾಯಕ ದೇವಸ್ಥಾನದ 30ನೇ ವಾರ್ಷಿಕ ವರ್ಧಂತಿ ಉತ್ಸವವು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

ಬೆಳಿಗ್ಗೆ ಹತ್ತು ಗಂಟೆಯಿಂದ ಗಣಹೋಮ ಕಾರ್ಯಕ್ರಮದೊಂದಿಗೆ ಆರಂಭಗೊಂಡ ವರ್ಧಂತಿ ಉತ್ಸವದಲ್ಲಿ ಮಧ್ಯಾಹ್ನ ಮಹಾಪೂಜೆಯ ನಂತರ ಮಹಾಮಂಗಳಾರತಿ ನಡೆದು ಮಧ್ಯಾಹ್ನ ಮಹಾಪ್ರಸಾದ ವಿತರಣೆ ನಡೆಯಿತು.

300x250 AD

ಶ್ರೀ.ಸಿದ್ಧಿವಿನಾಯಕ ದೇವಸ್ಥಾನ ಭಕ್ತ ಮಂಡಲ ಟ್ರಸ್ಟ್ ಕಮಿಟಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ವಾರ್ಷಿಕ ವರ್ಧಂತಿ ಉತ್ಸವವು ನಡೆಯಿತು. ಕಾರ್ಯಕ್ರಮದ ಯಶಸ್ಸಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶ್ರಮಿಸಿದ್ದರು. ವರ್ಧಂತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top