Slide
Slide
Slide
previous arrow
next arrow

ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ

300x250 AD

ಹೊನ್ನಾವರ: ತಾಲೂಕಿನ ಕಡತೋಕಾ ರಸ್ತೆ ಮತ್ತು ಚಿಪ್ಪಿಹಕ್ಕಲ್ ಮಾಡಗೇರಿ ರಸ್ತೆ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಚಾಲನೆ ನೀಡಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 50 ಲಕ್ಷ ವೆಚ್ಚದಲ್ಲಿ ಮಂಜೂರಾದ ಕಾಮಗಾರಿ ಇದಾಗಿದ್ದು, ಕಡತೋಕಾ ರಸ್ತೆ ಹಾಗೂ ಚಿಪ್ಪಿಹಕ್ಕಲ್ ಮಾಡಗೇರಿ ರಸ್ತೆ 1ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಭಾಗದ ರಸ್ತೆಗೆ ಮರುಡಾಂಬರಿಕರಣ ಇದಾಗಿದ್ದು, ಈ ರಸ್ತೆಯಿಂದ ಗ್ರಾಮಸ್ಥರಿಗೆ ಅನೂಕೂಲವಾಗಲಿದೆ ಎಂದು ಶಾಸಕರು ಹೇಳಿದರು. ರಾಜ್ಯಮಟ್ಟದ ಇಲಾಖಾ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಧಮೇಂದ್ರ ಗೌಡ ಇವರನ್ನು ಇದೆ ವೇಳೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಶಿವಾನಂದ ಹೆಗಡೆ ಕಡತೋಕ, ಗ್ರಾ.ಪಂ‌. ಅಧ್ಯಕ್ಷರಾದ ಸಾವಿತ್ರಿ ಭಟ್, ಗ್ರಾ.ಪಂ.ಸದಸ್ಯರು, ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top