ಸಿದ್ದಾಪುರ: ಸಹಕಾರ ರತ್ನ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಅವರ ವ್ಯಕ್ತಿತ್ವ ಅನುಕರಣೀಯವಾದುದು. ಸಹಕಾರ ಶಿಕ್ಷಣ ಆರೋಗ್ಯ, ರಾಜಕಾರಣ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅವರ ಸೇವೆ ಮಾದರಿಯಾಗಿದೆ. ಅವರು ನಿರ್ವಹಿಸಿದ ಎಲ್ಲ ಹುದ್ದೆಗಳಿಗೆ ಘನತೆಯನ್ನು ತಂದಿದ್ದಾರೆ. ಅವರೊಬ್ಬ ಧೀಮಂತ ವ್ಯಕ್ತಿತ್ವ ಹೊಂದಿದವರು. ಅಪರೂಪದ ವ್ಯಕ್ತಿ ಎಂದು ಸಿದ್ದಾಪುರ ಟಿ.ಎಂ.ಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ ಹೇಳಿದರು.
ಅವರು ಸಿದ್ದಾಪುರ ಟಿ.ಎಂ.ಎಸ್‌ದಲ್ಲಿ ಏರ್ಪಡಿಸಿದ್ದ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಶೃದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ|| ರವಿ ಹೆಗಡೆ ಹೂವಿನಮನೆ ಮಾತನಾಡಿ ಶಾಂತಾರಾಮ ಹೆಗಡೆ ಸಹಕಾರ ಕ್ಷೇತ್ರಕ್ಕೆ ಅಪಾರ ಸೇವೆಯನ್ನು ನೀಡಿದ್ದಾರೆ. ಅವರ ಸೇವೆ ಅನುಪಮವಾದದು ಎಂದರು. ಟಿ.ಎಸ್.ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ ಅವರು ಸಹಕಾರಿಗಳಿಗೆ ಅವರು ಉತ್ತಮ ಮಾರ್ಗದರ್ಶಿ ಎಂದು ಬಣ್ಣಿಸಿದರು. ಹಿರಿಯ ಸಾಮಾಜಿಕ ಕಾರ್ಯಕರ್ತ ವಿ.ಎನ್.ನಾಯ್ಕ ಬೇಡ್ಕಣಿ ಮಾತನಾಡಿ ಅವರೊಬ್ಬ ಅಪರೂಪದ ವ್ಯಕ್ತಿ. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡ ವ್ಯಕ್ತಿ ಎಂದರು. ಅಡಿಕೆ ವ್ಯಾಪಾರಸ್ಥರ ಪರವಾಗಿ ಆರ್. ಎಸ್.ಹೆಗಡೆ ಹರಗಿ, ಟಿ.ಎಂ.ಎಸ್ ನಿರ್ದೇಶಕ, ಎಲ್.ಆರ್. ಹೆಗಡೆ ಬಾಳೇಕುಳಿ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ಜಿ. ನಾಗರಾಜ, ಗಣ್ಯ ವ್ಯಾಪಾರಿಗಳಾದ ಎಸ್. ಎ. ಭಟ್ಟರವರು ಮಾತನಾಡಿದರು.
ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತಿç ಬಿಳಗಿ, ಲಯನ್ಸ್ ಅಧ್ಯಕ್ಷ ರವಿ ಪಾಟೀಲ್, ಎನ್.ವಿ.ಹೆಗಡೆ ಮುತ್ತಿಗೆ, ರಮಾನಂದ ಹೆಗಡೆ ಮಳಗುಳಿ, ಜಿ.ಐ. ನಾಯ್ಕ ಕಾನಗೋಡ, ಪರಶುರಾಮ ನಾಯ್ಕ ಮುಗದೂರು ಹಾಗೂ ಪಿ.ಎಲ್.ಡಿ. ಬ್ಯಾಂಕ್ ಪ್ಯಾಡಿ ಸೊಸೈಟಿ ಅನೇಕ ಸಹಕಾರಿ ಸಂಘಗಳ ಅಧ್ಯಕ್ಷರು ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿ ವಂದಿಸಿದರು.