Slide
Slide
Slide
previous arrow
next arrow

ಫೆ.10ಕ್ಕೆ ‘ದೇವರು ಕೊಟ್ಟ ತಂಗಿ’ ನಾಟಕ ಪ್ರದರ್ಶನ

300x250 AD

ದಾಂಡೇಲಿ: ವೆಸ್ಟ್ ಕೋಸ್ಟ್ ಪೇಪರ್ ಮಿಲ್‌ ಇದರ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಆಶ್ರಯದಡಿ, ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ನಗರದ ಶ್ರೀ ನಟರಾಜ ನಾಟ್ಯ ಸಂಘದವರು ಅಭಿನಯಿಸುತ್ತಿರುವ ‘ದೇವರು ಕೊಟ್ಟ ತಂಗಿ’ ಸಾಮಾಜಿಕ, ಕೌಟುಂಬಿಕ ನಾಟಕ ಪ್ರದರ್ಶನವು  ಹಳೆ ನಗರಸಭೆಯ ಮೈದಾನದಲ್ಲಿ ಫೆ.10, ಶನಿವಾರ ರಾತ್ರಿ 7.30 ಗಂಟೆಗೆ ನಡೆಯಲಿದೆ ಎಂದು ಶ್ರೀನಟರಾಜ ನಾಟ್ಯ ಸಂಘದ ಅಧ್ಯಕ್ಷರಾದ ಹನುಮಂತ ಕಾರಗಿ ತಿಳಿಸಿದ್ದಾರೆ.

ಅವರು ಶುಕ್ರವಾರ ಸಂಜೆ ನಗರದಲ್ಲಿ ಮಾಧ್ಯಮಕ್ಕೆ ನಾಟಕ‌ ಪ್ರದರ್ಶನದ ಕುರಿತಂತೆ ಮಾಹಿತಿಯನ್ನು ನೀಡಿ, ಈ ಪ್ರದರ್ಶನ ಕಾರ್ಯಕ್ರಮವನ್ನು ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ವಹಿಸಲಿದ್ದಾರೆ ಎಂದರು.ಸುಂದರ ಸಾಮಾಜಿಕ ಕೌಟುಂಬಿಕ ನಾಟಕ ಪ್ರದರ್ಶನವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸುವಂತೆ ಹನುಮಂತ ಕಾರಗಿ ವಿನಂತಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಶ್ರೀನಟರಾಜ ನಾಟ್ಯ ಸಂಘದ ಮುರ್ತುಜಾ ಹುಸೇನ್ ಆನೆಹೊಸೂರ, ಎಸ್.ಎಸ್. ಕುರ್ಡೇಕರ್, ಶ್ರೀಮಂತ ಮದರಿ, ಲಿಂಗರಾಜ ಕುದುರಿ‌ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top