Slide
Slide
Slide
previous arrow
next arrow

ಫೆ.11ಕ್ಕೆ ‘ಉದ್ಯೋಗ ಮೇಳ’

300x250 AD

ಹೊನ್ನಾವರ: ತಾಲೂಕಿನ ಅರೇ ಅಂಗಡಿಯಲ್ಲಿ ಸಿರಿ ಬಿಎಸ್‌ಡಬ್ಲ್ಯೂ ಪದವಿ ಕಾಲೇಜ್ ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ ಲೈನ್ ಸಹಯೋಗದೊಂದಿಗೆ ಫೆ.11ರಂದು ಉದ್ಯೋಗ ಮೇಳ ನಡೆಯಲಿದೆ ಎಂದು ಪದವಿ ಕಾಲೇಜಿನ ಪ್ರಾಂಶುಪಾಲರಾದ ಅರುಣ್ ನಾಯ್ಕ ತಿಳಿಸಿದ್ದಾರೆ.

ಅರೇ ಅಂಗಡಿಯ ಸಿರಿ ಬಿಎಸ್‌ಡಬ್ಲ್ಯೂ ಪದವಿ ಕಾಲೇಜ್ ನಲ್ಲಿ ಫೆ.11ರ ಬೆಳಿಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ.  ಉದ್ಯೋಗಾಕಾಂಕ್ಷಿ ಯುವಕ-ಯುವತಿಯರಿಗೆ ನೇರ ಸಂದರ್ಶನದ ಮೂಲಕ ಪ್ರತಿಷ್ಠಿತ ಬ್ಯಾಂಕ್ ಹಾಗೂ ಎಂಎನ್‌‌ಸಿ ಕಂಪನಿಗಳಿಗೆ ನೇರ ನೇಮಕ ಹೊಂದುವ ಸುವರ್ಣ ಅವಕಾಶ ಸಿಗಲಿದೆ. ಕನಿಷ್ಟ 50 ಹುದ್ದೆಗಳ ಆಯ್ಕೆಯಾಗಲಿದೆ. ಹುಬ್ಬಳ್ಳಿ ಧಾರವಾಡ ಹಾವೇರಿ, ಕುಮಟ, ಕಾರವಾರ, ಶಿರಸಿ, ಭಟ್ಕಳ, ಅಂಕೋಲಾ, ಹಳಿಯಾಳ, ದಾಂಡೇಲಿ, ಶಿವಮೊಗ್ಗ, ಉಡುಪಿ, ಮಂಗಳೂರು, ತುಮಕೂರು, ಗದಗ, ಕೊಪ್ಪಳ, ಹೊಸಪೇಟೆ, ಮೈಸೂರು, ಬೆಂಗಳೂರು, ಇನ್ನು ಮುಂತಾದ ಸ್ಥಳಗಳಲ್ಲಿ ಉದ್ಯೋಗಾವಕಾಶ ಲಭ್ಯವಿದೆ ಎಂದರು.ಪಿಯುಸಿ, ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಎಸ್‌ಡಬ್ಲ್ಯೂ, ಎಂಎಸ್‌ಡಬ್ಲ್ಯೂ, ಎಂಎ, ಎಂಕಾಂ, ಎಂಬಿಎ, ಐಟಿಐ, ಡಿಪ್ಲೋಮೋ, ಬಿಇ, ಇನ್ನಿತರ ಯಾವುದೇ ಪದವಿ ಹೊಂದಿರುವ  ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸಂದರ್ಶನಕ್ಕೆ ಹಾಜರಾಗುವ ಎಲ್ಲ ಅಭ್ಯರ್ಥಿಗಳು ರೆಸ್ಯೂಮ್,ಎಸ್ ಎಸ್ ಎಲ್‌ಸಿ,ಪಿಯುಸಿ,ಡಿಗ್ರಿ ಮಾರ್ಕ್ಸ್ ಕಾರ್ಡ್,ಆಧಾರ್ ಕಾರ್ಡ್ ,ಪಾನ್ ಕಾರ್ಡ್,ಪಾಸ್ ಪೊರ್ಟ್ ಸೈಜ್ ಫೋಟೋ ದಾಖಲಾತಿಗಳೊಂದಿಗೆ ಹಾಜರಾಗಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.ಸಮಾಜಕಾರ್ಯ  ಪದವಿ ಕಾಲೇಜು ಸಮಾಜಕಾರ್ಯದ ಹಾದಿಯಲ್ಲಿಯೇ ಸಾಗುತ್ತಿದೆ ಎಂಬುದಕ್ಕೆ ಈ ಉದ್ಯೋಗ ಮೇಳ ಸಾಕ್ಷಿಯಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕರೆನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top